

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯ ಕಳೆದ ೨೦೨೧ ರಿಂದ ೨೦೨೪ನೇ ಸಾಲಿನ ವರೆಗಿನ ಒಟ್ಟು ನಾಲ್ಕು ವರ್ಷಗಳ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಫೆ.೧೦ ರಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕೆ.ಆರ್.ದುರ್ಗಾದಾಸ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿರುವುದಿಲ್ಲ. ಹೀಗಾಗಿ ೫೯ ಜನ ಕಲಾವಿದರು ಈ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ನವನಗರದ ಕಲಾಭವನದಲ್ಲಿ ಸಂಜೆ ೫ ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಪ್ರಶಸ್ತಿ ಪುರಷ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಽ ಪ್ರಕಾಶ ಹುಕ್ಕೇರಿ, ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಽಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸಂಜೆ ೪ ಗಂಟೆಗೆ ನಗರದ ಎಲ್.ಐ.ಸಿ ಸರ್ಕಲ್‌ದಿಂದ ಕಲಾಭವನದ ವರೆಗೆ ವಿವಿಧ ಜಾನಪದ ಕಲಾತಂಡದೊAದಿಗೆ ಪ್ರಶಸ್ತಿ ಪುರಷ್ಕೃತರ ಮೆರವಣಿಗೆ ನಡೆಯಲಿದೆ. ಬಯಲಾಟ ಕಲೆಯನ್ನು ಶತಮಾನಗಳಿಂದ ತಲೆಮಾರಿನಿಂದ ಉಳಿಸಿಕೊಂಡು ಬರುವಲ್ಲಿ ಕಲಾವಿದರ ಪಾತ್ರ ತುಂಬಾ ದೊಡ್ಡದು. ಬಯಲಾಟದಲ್ಲಿ ನಾನಾ ಪ್ರಕಾರಗಳಿದ್ದು, ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಮುಂತಾದ ಆಟಗಳಲ್ಲಿ ಹೆಸರಾಂತ ಕಲಾವಿದರು ಇದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಉದ್ದೇಶ ಅಕಾಡೆಮಿಯದ್ದಾಗಿದೆ ಎಂದು ಹೇಳಿದರು.
ಅಕಾಡೆಮಿಯ ಸದಸ್ಯರಾದ ಲಕ್ಷ÷್ಮಣ ದೇಸಾರಟ್ಟಿ, ಅನಸೂಯಾ ವಡ್ಡರ, ಸುಜಾತಾ ಬಿರಾದಾರ, ಮಲ್ಲಮ್ಮ ಮಾದರ, ಭೀಮಪ್ಪ ಹುದ್ದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ರಜಿಸ್ಟಾçರ್ ಕರ್ಣಕುಮಾರ ಜೈನಾಪುರ ಉಪಸ್ಥಿತರಿದ್ದರು.