ಫೆ.7ಕ್ಕೆ ಎಫ್‌ಎಸ್‌ಎಲ್ ವರದಿ?

CTD 9--05
Published on

ಚಿತ್ರದುರ್ಗ: ನಗರದ ಜೈಲು ರಸ್ತೆ ಪಾಳುಬಿದ್ದ ಮನೆಯಲ್ಲಿ ಈಚೆಗೆ ದೊರೆತಿರುವ ಐದು ಅಸ್ಥಿ ಪಂಜರಗಳಿಗೆ ಸಂಬಂಧಿಸಿದಂತೆ ಡಿಎನ್‌ಎ, ಇತರ ಪರೀಕ್ಷೆಗಳಿಗಾಗಿ ಬೆಂಗಳೂರು ಮಡಿವಾಳದಲ್ಲಿರುವ ರಾಜ್ಯವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹಲವು ಸ್ಯಾಂಪಲ್ಸ್‌ಗಳನ್ನು ಸೋಮವಾರ ಪೊಲೀಸರು ಕಳಿಸಿದ್ದಾರೆ. ಅಸ್ಥಿಪಂಜರಗಳ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರ ತಂಡ, ಐವರು ಸಾವಿನ ಕಾರಣ ಕಾಯ್ದಿರಿಸಿ, ಪೋಸ್ಟ್‌ಮಾರ್ಟ್‌ಮ್ ವೇಳೆ ಸಂಗ್ರಹಿಸಿದ್ದ ವಿವಿಧ ಸ್ಯಾಂಪಲ್ಸ್‌ಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗಳಿಗೆಂದು ಪೊಲೀಸರಿಗೆ ಕೊಟ್ಟಿತ್ತು. ಈ ಪ್ರಯೋಗಾಲಯದ ವರದಿ ಫೆಬ್ರವರಿ 7ರ ವೇಳೆಗೆ ವರದಿ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net