

ಚಿತ್ರದುರ್ಗ: ನಗರದ ಬ್ರೈಟ್‌ಸ್ಟಾರ್ ಕರಾಟೆ ಅಸೋಷಿಯೇಶನ್, ಫೆ.3ರಿಂದ 2 ದಿನಗಳ ಕಾಲ ನಗರದ ನಗರದ ಅನುಭವ ಮಂಟಪದಲ್ಲಿ 29ನೇ ಅಖಿಲಭಾರತ ಓಪನ್ ಕರಾಟೆ ಚಾಂಪಿಯನ್‌ಶಿಪ್‘ಮೆಗಾ ಕೆಸಿವಿ ಕಪ್’ಪಂದ್ಯಾವಳಿ ಏರ್ಪಡಿಸಿದೆ ಎಂದು ಅಸೋಷಿಯೇಶನ್ ಸಂಸ್ಥಾ ಪಕ ಎಂ.ಎಲ್.ಶಂಕರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಪಂದ್ಯಾವಳಿಯಲ್ಲಿ ಪಶ್ಚಿಮಬಂಗಾಳ,ತಮಿಳುನಾಡು,ಕೇರಳ, ಪಂಜಾಬ್,ಆಂಧ್ರಪ್ರದೇಶ,ತೆಲಂಗಾಣ ಮತ್ತು ಕರ್ನಾಟಕದಿಂದ 1500ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿವಿಧ ರಾ ಜ್ಯಗಳಿಂದ 40 ಜನ ತೀರ್ಪುಗಾರರು ಪಾಲ್ಗೊಳ್ಳಲಿದ್ದಾರೆ.
ಆರರಿಂದ ಇಪ್ಪತ್ತೈದು ವರ್ಷದೊಳಗಿನ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ 18ರಿಂದ 25 ವರ್ಷದೊಳಗಿನ ಸ್ಪರ್ಧೆಗಳ ಪೈಕಿ ವಿಜೇತರಾಗುವ ಒಬ್ಬ ಕ್ರೀಡಾಪಟುವಿಗೆ 25 ಸಾವಿರ ನಗದು,ಟ್ರೋಫಿ ಹಾಗೂ ಪದಕ ಮತ್ತು ಮತ್ತು ಪ್ರತಿ ಸ್ಪರ್ಧೆಯಲ್ಲಿ ವಿ ಜೇತರಾಗುವ ಕ್ರೀಡಾಪಟುಗಳಿಗೆ ಟ್ರೋಫಿ,ಪದಕ ನೀಡಲಾಗುವುದು.
3ರಂದು ಬೆಳಗ್ಗೆ 11.30ಕ್ಕೆ ಪಂದ್ಯಾವಳಿ ಉದ್ಘಾಟನಾ ಸಮಾರಂಭ ಜರುಗಲಿದೆ. ತೆಲುಗು ಚಿತ್ರನಟ ಸುಮನ್‌ತಳವಾರ್,ನಟ ದೊಡ್ಡ ಣ್ಣ,ಕ್ರೀಡಾ ಸಚಿವ ಬಿ.ನಾಗೇಂದ್ರ,ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಮಾಜಿ ಸಚಿವ ಎಚ್.ಆಂಜನೇಯ,ಶಾಸಕರಾದ ಕೆ.ಸಿ.ವೀರೇ ಂದ್ರಪಪ್ಪಿ,ಬಿ.ಕೆ.ಸಂಗಮೇಶ್ವರ, ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್,ನಗರಸಭೆ ಮಾಜಿ ಆಧ್ಯಕ್ಷ ಬಿ.ಕಾಂತರಾಜ್,ಎಂ.ಸಿ.ರಘುಚಂದ ನ್,ಸಂದೀಪ್,ಭಾಸ್ಕರ್,ಸುರೇಶ್‌ಬಾಬು,ಸೂರಪ್ಪ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶೇಖರ್, ಸುರೇಶ್,ತಿಪ್ಪೇಸ್ವಾಮಿ,ತಿಪ್ಪೇಶ್,ಇರ್ಫಾನ್,ಕಿಶೋರ್ ಸುದ್ದಿಗೋಷ್ಠಿಯಲ್ಲಿ ಇದ್ದರು.