ಫೆ.25 ರಂದು ವಿಪ್ರ ಸ್ನೇಹ ಸೌಹಾರ್ದ ಕೂಟ

ಫೆ.25 ರಂದು ವಿಪ್ರ ಸ್ನೇಹ ಸೌಹಾರ್ದ ಕೂಟ
Published on

ಹಾಸನ: ನಗರದ ಬ್ರಾಹ್ಮಣ ಸಭಾ ವತಿಯಿಂದ ಫೆ.25 ಭಾನುವಾರದಂದು ನಗರದ ಸೀತಾರಾಮಾಂಜನೇಯ ದೇವಾಲಯದಲ್ಲಿ ವಿಪ್ರ ಸ್ನೇಹ ಸೌಹಾರ್ದ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ ಎಸ್ ವೆಂಕಟೇಶ್ ತಿಳಿಸಿದರು.
ಜಿಲ್ಲೆಯ ಎಲ್ಲಾ ವಿಪ್ರ ಸಂಘಟನೆಗಳ ಸಹಕಾರದಿಂದ ಈ ಸೌಹಾರ್ದ ಕೂಟ ಯೋಜಿಸಲಾಗಿದೆ.ಇದರ ಅಂಗವಾಗಿ ನಮ್ಮ ಸಮಾಜದ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಿಗಾಗಿ ಫೆ.11 ಭಾನುವಾರ ಕ್ರೀಡೆ ಮತ್ತು ಗಾಯನ, ವಿಶೇಷವಾಗಿ ರಾಮಾಯಣದ ಬಗ್ಗೆ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ರವೀಂದ್ರ ನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಪ್ರ ಸ್ನೇಹ ಸೌಹಾರ್ದ ಕೂಟ ಕಾರ್ಯಕ್ರಮವನ್ನು ಮೈಸೂರಿನ ಪ್ರಾಧ್ಯಾಪಕರು ಹಾಗೂ ಸಂಸ್ಕೃತಿ ಚಿಂತಕಿ ಜ್ಯೋತಿ ಶಂಕರ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ 10 ಜನ ಹಿರಿಯ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ನಗರದ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಕ ಸುಬ್ರಹ್ಮಣ್ಯ ಹಾಗೂ ಸೀತಾರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಎ.ಆರ್.ನಾರಾಯಣ್ ಅವರು ಆಗಮಿಸಲಿದ್ದಾರೆ ಎಂದರು
ಸಂಜೆ ಚಿಕ್ಕಮಂಗಳೂರಿನ ಹೆಸರಾಂತ ಕಲಾತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಸಭಾದ ಕೋಶಾಧಿಕಾರಿ, ಎನ್.ಸುದೀಂದ್ರ,ಬದ್ರಿನಾರಾಯಣ,ಸುಜಾತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net