

ಹಾಸನ : ನಗರದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ ವತಿಯಿಂದ ಫೆ.23 ಮತ್ತು 24 ರಂದು ಕಾಮರ್ಸ್ ಎಜುಕೇಷನ್ ಕಾನ್‌ಕ್ಲೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ವೈ.ಅರುಣ್ ಕುಮಾರ್ ಅವರು ತಿಳಿಸಿದರು.
ಮೊದಲ ದಿನದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಪತ್ರಕರ್ತ ಎಸ್.ರವಿಕುಮಾರ್, ನಿವೃತ್ತ ಐಆರ್‌ಎಸ್ ಅಧಿಕಾರಿ ಕೋದಂಡರಾಮು ಮತ್ತಿತರರು ಭಾಗವಹಿಸಲಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಬಿಜಿನೆಸ್ ಕ್ವಿಜ್, ಸ್ವವಲಂಬಿ ಅಧಿವೇಶ, ವಾಣಿಜ್ಯ ವಲಯ ಪ್ರವೇಶದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017 ರಲ್ಲಿ ಆರಂಭವಾದ ನಮ್ಮ ಕಾಲೇಜು ವಾಣಿಜ್ಯ ವಿಭಾಗಕ್ಕೆ ಸಂಬಂಧಪಟ್ಟಂತೆ ಬಿ.ಕಾಂ, ಬಿಬಿಎಂ, ಬಿಸಿಎ, ಎಂ.ಕಾಂ, ಎಂಬಿಎ ಕೋರ್ಸ್ಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾಣಿಜ್ಯ ಕೇಂದ್ರದ ಅವಕಾಶಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಸ್ಥೆ ನಿರ್ದೇಶಕರಾದ ಅರುಣ್‌ಕುಮಾರ್, ಎಚ್.ಕೆ.ಸತೀಶ್, ಅನಂತೇಶ್ ಹಾಜರಿದ್ದರು.