ಫೆ.1ರಿಂದ ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನ

bhr clean
ಬಾಳೆಹೊನ್ನೂರಿನ ಮಲ್ನಾಡ್ ಗೆಳೆಯರ ಬಳಗ ಆಯೋಜಿಸಿರುವ ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನದ ಬ್ಯಾನರ್ ಅನ್ನು ಗ್ರಾಪಂ ಅಧ್ಯಕ್ಷ ರವಿಚಂದ್ರ ಬಿಡುಗಡೆಗೊಳಿಸಿದರು. ಬಿ.ಸಿ.ಸಂತೋಷ್‌ಕುಮಾರ್, ಅರುಣೇಶ್, ಇಬ್ರಾಹಿಂ ಶಾಫಿ, ಕಾಶಪ್ಪ ಇತರರಿದ್ದರು.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಸ ಹಾಕಿ ಪರಿಸರ ಮಾಲಿನ್ಯ ಮಾಡುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಲಿನ್ಯದ ಮಹಾರಾಜ ಎಂಬ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಲ್ನಾಡ್ ಗೆಳೆಯರ ಬಳಗದ ಮುಖ್ಯಸ್ಥ ಬಿ.ಸಿ.ಸಂತೋಷ್‌ಕುಮಾರ್ ತಿಳಿಸಿದರು.

ಮಾಲಿನ್ಯದ ಮಹಾರಾಜ ಜಾಗೃತಿ ಅಭಿಯಾನದ ಬ್ಯಾನರ್ ಅನ್ನು ಗ್ರಾಪಂನಲ್ಲಿ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿ, ಮಲ್ನಾಡ್ ಗೆಳೆಯರ ಬಳಗ, ಪೊಲೀಸ್ ಠಾಣೆ ಹಾಗೂ ಬಿ.ಕಣಬೂರು ಗ್ರಾಪಂನ ಸಹಯೋಗದಲ್ಲಿ ಫೆ.1ರಿಂದ 28ರವರೆಗೆ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.

ರಸ್ತೆ ಬದಿ, ಕೆರೆ, ಹಳ್ಳ, ನದಿ ಮುಂತಾದ ಕಡೆಗಳಲ್ಲಿ ಕಸ ಹಾಕುವವರನ್ನು ಗುರುತಿಸಿ ಅವರಿಗೆ ಮಾಲಿನ್ಯದ ಮಹಾರಾಜ ಎಂಬ ವ್ಯಂಗ್ಯವಾದ ಬಿರುದು ನೀಲಾಗುವುದು. ಬಾಳೆಹೊನ್ನೂರು ಪಟ್ಟಣ ಹಾಗೂ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರ ಫೋಟೋ ಅಥವಾ ವಿಡಿಯೋವನ್ನು ಸೆರೆ ಹಿಡಿದು 8277377722, 94448823867, 9380569687 ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಬಹುದು. ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಏಳೆಂಟು ತಿಂಗಳಲ್ಲಿ ಸ್ವಚ್ಛ ಬಾಳೆಹೊನ್ನೂರಿನ ಗುರಿ ನಮ್ಮ ಮುಂದಿದೆ ಎಂದರು.

ಬಿ.ಕಣಬೂರು ಗ್ರಾಪಂ ಸದಸ್ಯರಾದ ಬಿ.ಕೆ.ಮಧುಸೂದನ್, ಇಬ್ರಾಹಿಂ ಶಾಫಿ, ಎಂ.ಎಸ್.ಅರುಣೇಶ್, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net