

ಕೂಡ್ಲಿಗಿ: ಫೂಟ್ ಥೆರಪಿ ಚಿಕಿತ್ಸೆ ಮೂಲಕ ಆರೋಗ್ಯದ ಲಾಭ ಪಡೆಯಬೇಕು ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಹೇಳಿದರು.
ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಂಘ, ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಮಿತಿ, ಮುಕ್ತಿಧಾಮ ಸೇವಾ ಸಮಿತಿಯಿಂದ ಆಯೋಜಿಸಿದ್ದ ಉಚಿತ ಫೂಟ್ ಥೆರಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಬಹುತೇಕರು ನಾನಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂತಹ ಚಿಕಿತ್ಸೆಗಳ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬಹುದು. 13 ದಿನ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ವಾಸವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ಶೆಟ್ಟಿ, ಬಂಡ್ರಿ ವೆಂಕಣ್ಣ ಶೆಟ್ಟಿ, ಮುಕ್ತಿಧಾಮ ಸೇವಾ ಸಮಿತಿ ಅಧ್ಯಕ್ಷ ಬಿ.ಎಸ್.ಆನಂದ ಬಾಬು, ಗೌರವಾಧ್ಯಕ್ಷ ಎಸ್.ವಿರೂಪಾಕ್ಷಮೂರ್ತಿ, ಕಾರ್ಯದರ್ಶಿ ಜಿ.ವೇಣುಗೋಪಾಲ, ಪಪಂ ಸದಸ್ಯ ತಳಾಸ್ ವೆಂಕಟೇಶ, ಬಂಡ್ರಿ ವಿಜಯಕುಮಾರ್, ಗಂಗಾಧರ ಶೆಟ್ಟಿ, ಬಂಡ್ರಿ ನವೀನ ಶೆಟ್ಟಿ, ಬಿ.ವಿನಾಯಕ ಶೆಟ್ಟಿ, ಎಲ್.ರಾಘವೇಂದ್ರ ಶೆಟ್ಟಿ, ಆರ್.ರಾಘವೇಂದ್ರ ಶೆಟ್ಟಿ, ರಾಮಸ್ವಾಮಿ ಶೆಟ್ಟಿ, ರಾಮು ಕಾಟ್ವಾ, ಬಿ.ನಾಗರಾಜ, ಫೂಟ್ ಥೆರಪಿ ತರಬೇತುದಾರ ರಘುನಾಥ ಇತರರಿದ್ದರು.