ಫುಡ್ ಕೋರ್ಟ್‌ನಲ್ಲಿ ಶುಚಿತ್ವ

Published on

ಹಾಸನ: ನಗರದ ಎಂ.ಜಿ.ರಸ್ತೆಯಲ್ಲಿರುವ ಫುಡ್ ಕೋರ್ಟ್‌ಗೆ ಗುರುವಾರ ನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್, ಇಂಜಿನಿಯರ್ ಕವಿತಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಯಾರು ಮಾಡಿದ್ದ ವಿವಿಧ ಆಹಾರ ಪದಾರ್ಥಗಳು ಹಾಗೂ ಮಳಿಗೆಗಳ ವ್ಯಾಪ್ತಿಯಲ್ಲಿ ಶುಚಿತ್ವವನ್ನು ಮೇಯರ್ ಹಾಗೂ ಅಧಿಕಾರಿಗಳ ತಂಡ ಪರಿಶೀಲಿಸಿತು. ಈ ವೇಳೆ ಕೆಲವರು ಶುಚಿತ್ವ ಕಾಪಾಡದೇ ಇರುವುದು ಕಂಡು ಬಂತು.

ಕೆಲವರು ವಾಟರ್ ಕ್ಯಾನ್‌ಗಳನ್ನು ಕ್ಲೀನ್ ಮಾಡಿರಲಿಲ್ಲ. ಅಲ್ಲದೆ ಅವಧಿ ಮುಗಿದಿರುವ ಆಹಾರ ತಯಾರಿಕಾ ಪದಾರ್ಥಗಳೂ ಕಣ್ಣಿಗೆ ಬಿದ್ದವು. ಕೂಡಲೇ ಅವರನ್ನು ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಪರಿಸ್ಥಿತಿ ಕಂಡು ಗರಂ ಆದ ಮೇಯರ್, ಉತ್ತಮ ವಾತಾವರಣ ಕಾಪಾಡದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಬುದ್ಧಿವಾದ ಹೇಳಿದರು. ಇದೇ ವೇಳೆ ವಿವಿಧ ಆಹಾರ ತಯಾರಿಕೆಗೆ ಬಳಕೆ ಮಾಡುವ ಎಣ್ಣೆಯನ್ನು ಮರು ಬಳಕೆ ಮಾಡದಂತೆ ಸಲಹೆ ನೀಡಿದರು.

ಈಗಾಗಲೇ ಬಳಸಿ, ಮರು ಬಳಕೆ ಮಾಡಲು ಇಟ್ಟು ಕೊಂಡಿದ್ದ ಎಣ್ಣೆಯನ್ನು ನಗರ ಪಾಲಿಗೆ ಸಿಬ್ಬಂದಿ ಹೊರ ಚೆಲ್ಲಿದರು. ಕನ್ನಡ ಬಾರದ ಹೊರ ರಾಜ್ಯದವರೂ ಫುಡ್‌ಕೋರ್ಟ್‌ನಲ್ಲಿ ವಿವಿಧ ತಿಂಡಿ, ತಿನಿಸು ಮತ್ತು ಐಸ್ ಕ್ರೀಂ ಮಾರಾಟ ಮಾಡುತ್ತಿದ್ದು, ಇಂಥವರು ಕೂಡಲೇ ಕನ್ನಡ ಕಲಿಯಿರಿ ಎಂದು ಸಲಹೆ ನೀಡಿದರು. ಆರೋಗ್ಯ ನಿರೀಕ್ಷಕರಾದ ಪ್ರಸಾದ್, ಆದರ್ಶ ಹಾಗೂ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net