

ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಗೆ ಹೊಂದಿಕೊAಡಿರುವ ನೂತನ ಫುಡ್ ಕೋರ್ಟ್ನ ೨೭ ಮಳಿಗೆಗಳು ಹಾಗೂ ಎಂಜಿ ರಸ್ತೆಯಲ್ಲಿರುವ ನಗರಸಭೆಗೆ ಸೇರಿದ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಕಟ್ಟದಲ್ಲಿ ಖಾಲಿ ಇದ್ದ ೧೨ ಮಳಿಗೆಗಳನ್ನು ಮಂಗಳವಾರ ನಡೆದ ಹರಾಜಿನಲ್ಲಿ ಬಿಡ್‌ದಾರರು ಬಾಡಿಗೆಗೆ ಪಡೆದುಕೊಂಡರು.
ಹರಾಜು ಪ್ರಕ್ರಿಯೆ ನಂತರ ಮಾಹಿತಿ ನೀಡಿದ ನಗರಸಭೆ ಪ್ರಭಾರ ಅಧ್ಯಕ್ಷೆ ಅನು ಮಧುಕರ್, ಹರಾಜಿನಲ್ಲಿ ಮಳಿಗೆ ಬಾಡಿಗೆ ಪಡೆದವರು ಬೇರೆಯವರಿಗೆ ಒಳ ಬಾಡಿಗೆ ನೀಡಬಾರದು. ಫುಡ್ ಕೋರ್ಟ್ನಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಅಂಬೇಡ್ಕರ್ ರಸ್ತೆ ಮತ್ತು ಬೇಲೂರು ರಸ್ತೆಯ ಎಲ್ಲ ಬೀದಿ ಬದಿ ವ್ಯಾಪಾರಸ್ಥರು ಫುಡ್ ಕೋರ್ಟ್ಗೆ ಸ್ಥಳಾಂತರಗೊಳ್ಳಬೇಕು ಎಂದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಫುಡ್ ಕೋರ್ಟ್ನ ಒಟ್ಟು ೪೨ ಮಳಿಗೆಗಳ ಪೈಕಿ ೨೭ ಮಳಿಗೆಗಳು ಹರಾಜಾಗಿವೆ. ಉಳಿದವುಗಳನ್ನು ಮುಂದಿನ ೧೫ ದಿನಗಳಲ್ಲಿ ಮತ್ತೆ ಟೆಂಡರ್ ಕರೆದು ಹರಾಜು ಮಾಡಲಾಗುವುದು ಎಂದು ತಿಳಿಸಿದರು.
ಎಂಜಿ ರಸ್ತೆ ವಾಜಪೇಯಿ ವಾಣಿಜ್ಯ ಕಟ್ಟದಲ್ಲಿ ಖಾಲಿ ಇದ್ದ ೧೩ ಮಳಿಗೆಗಳ ಪೈಕಿ ಇಂದು ೧೨ ಮಳಿಗೆಗಳು ಹರಾಜಾಗಿವೆ. ಬಿಡ್‌ದಾರರು ಪೈಪೋಟಿ ಮೇಲೆ ಹರಾಜು ಕೂಗಿ ಮಳಿಗೆಗಳನ್ನು ಬಾಡಿಗೆಗೆ ಹಿಡಿದಿದ್ದಾರೆ. ನಗರಸಭೆಗೆ ಉತ್ತಮ ಆದಾಯ ಬರುವಂತಾಗಿದೆ ಎಂದರು.
ಇದೇ ವೇಳೆ ನಗರದ ಕತ್ರಿಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಕಟ್ಟಡದಲ್ಲಿ ೩೬ ಮಳಿಗೆಗಳು ಮತ್ತು ನಗರದ ಆಜಾದ್ ಪಾಕ್ ಸರ್ಕಲ್‌ನಲ್ಲಿ ನಿರ್ಮಿಸಲಾಗಿರುವ ನೂತನ ಜಿಮ್ ಕಟ್ಟಡದಲ್ಲಿರುವ ಮಳೆಗಗಳ ಹರಾಜಿನಲ್ಲೂ ಯಾರೊಬ್ಬರೂ ಭಾಗವಹಿಸಿಲ್ಲ. ಅವುಗಳ ಮರು ಹರಾಜಿಗೆ ಮತ್ತೊಂದು ದಿನಾಂಕ ನಿಗದಿಪಡಿಸುತ್ತೇವೆ ಎಂದು ತಿಳಿಸಿದರು.
ನೂತನ ಫುಡ್ ಕೋರ್ಟ್ನ ಮಳಿಗೆಗಳನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ಮೊದಲ ಆಧ್ಯತೆ ನೀಡಿ ನಿರ್ಮಿಸಲಾಗಿದೆ. ಈಗ ಖಾಲಿ ಉಳಿದ ಮಳೆಗೆಗಳನ್ನು ಬಾಡಿಗೆಗೆ ಪಡೆಯಲು ಮುಂದಾಗದಿದ್ದಲ್ಲಿ ಬೇರೆಯವರಿಗೆ ಅವಕಾಶಕೊಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದರು.
ಇದೇ ವೇಳೆ ವಿಜಯಪುರ ಬಡಾವಣೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಸ್ಥರಿಗಾಗಿ ಆ ಭಾಗದಲ್ಲಿ ಹೊಸದಾಗಿ ಮತ್ತೊಂದು ಫುಡ್ ಕೋರ್ಟ್ ನಿರ್ಮಿಸಲು ಉz್ದೆÃಶಿಸಿz್ದÉÃವೆ. ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸುತ್ತೇವೆ. ಅದಕ್ಕಾಗಿ ಹಣ ಮೀಸಲಿಟ್ಟಿz್ದÉÃವೆ. ಮೂರು ತಿಂಗಳಲ್ಲಿ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಿಸಲಾಗುವುದು ಎಂದರು.
ರಸ್ತೆ ಬದಿಗಳಲ್ಲಿ ಯಾವುದೇ ತಿಂಡಿಗಾಡಿಗಳನ್ನು ನಿಲ್ಲಿಸಬಾರದು ಎಂದು ಜಿಲ್ಲಾಡಳಿತದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ನಿರ್ಣಯವಾಗಿದೆ. ನಗರಸಭೆ ಕೌನ್ಸಿಲ್ ಸಭೆಯಲ್ಲೂ ತೀರ್ಮಾನವಾಗಿದೆ. ವ್ಯಾಪಾರಿಗಳಿಗೂ ತೊಂದರೆ ಆಗಬಾರದು ಎನ್ನುವ ಉz್ದÉÃಶದಿಂದ ಫುಡ್ ಕೋರ್ಟ್ ನಿರ್ಮಿಸಲಾಗಿದೆ. ಸಧ್ಯದಲ್ಲೇ ಅಂಬೇಡ್ಕರ್ ರಸ್ತೆ ಮತ್ತು ಬೇಲೂರು ರಸ್ತೆಯನ್ನು ತಿಂಡಿಗಾಡಿ ವ್ಯಾಪಾರ ನಿಷೇಧಿತ ವಲಯ ಎಂದು ಘೋಷಿಸುತ್ತೇವೆ ಎಂದರು.
ಇನ್ನು ಮುಂದೆ ನಗರದ ಅಂಬೇಡ್ಕರ್ ರಸ್ತೆ, ಹೆರಿಗೆ ಆಸ್ಪತ್ರೆ ರಸ್ತೆ, ಬೇಲೂರು ರಸ್ತೆ ಬದಿಗಳಲ್ಲಿ ತಿಂಡಿಗಾಡಿಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ. ಇಂದು ಹರಾಜಿನಲ್ಲಿ ಫುಡ್ ಕೋರ್ಟ್ ಮಳಿಗೆ ಬಾಡಿಗೆ ಪಡೆದವರಿಗೆ ಕೂಡಲೇ ಜಿಲ್ಲಾಡಳಿತದ ಅನುಮೋದನೆ ಪಡೆದು ನೊಂದಣಿ ಮಾಡಿಕೊಡುತ್ತೇವೆ ಎಂದರು.