ಫುಟ್‌ಬಾಲ್‌ನಲ್ಲಿ ಭೀಮನಹಳ್ಳಿ ಶಾಲೆ ಮಕ್ಕಳ ಸಾಧನೆ

BH1
Published on

ಚಿತ್ತಾಪುರ: ಭೀಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಫುಟ್‌ಬಾಲ್ ಪಂದ್ಯದಲ್ಲಿ ವಿದ್ಯಾರ್ಥಿ ಚಂದ್ರಶೇಖರ್ ನೇತೃತ್ವದ ಭೀಮನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ತಂಡ ಅಲ್ಲೂರ್ ಗ್ರಾಮದ ಶಾಲೆಯ ಟೀಮ್ ಅನ್ನು 2-0 ಅಂತರದಿAದ ಸೋಲಿಸಿ ಗೆಲುವು ದಾಖಲಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಭೀಮನಹಳ್ಳಿ ಶಾಲೆಯ ವಿದ್ಯಾರ್ಥಿಗಳಾದ ಬೀರೇಶ, ವಿಶ್ವರಾಜ ಎಸ್., ನಬಿಲಾಲ್, ವಿಶ್ವರಾಜ ಸಿ., ನಾಗರಾಜ ಆರ್., ಜಗದೀಶ, ದೇವರಾಜ, ಸಂತೋಷ, ಯಂಕಪ್ಪ, ಸಂತೋಷ ಎಸ್., ವೇಣುಕುಮಾರ ತಂದಲ್ಲಿದ್ದರು. ಮುಖ್ಯ ಕೋಚ್ ಮಹೇಶ, ಕೋಚ್ ರಾಘವೇಂದ್ರ, ಮ್ಯಾನೇಜರ್ ಮಲ್ಲಿನಾಥ ಕಾರ್ಯನಿರ್ವಹಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷ ಸಂಗಾರೆಡ್ಡಿ, ಮುಖ್ಯಗುರು ಅಪ್ಪಯ್ಯ ಹಿರೇಮಠ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net