

ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ತೋಟಗಾರಿಕಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ಬಿಮಾ ಯೋ ಜನೆಯಡಿ ಬೆಳೆ ವಿಮೆ ನೋಂದಣಿ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ,ಟೊಮೆಟೊಆ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆ ನೋಂದಣಿ ಮಾಡಬಹುದು.
ಚಿತ್ರದುರ್ಗ ತಾಲೂಕು ಕಸಬಾ,ತುರುವನೂರು ಹಾಗೂ ಹಿರೇಗುಂಟನೂರು ಹೋಬಳಿ(ಈರುಳ್ಳಿ ನೀರಾವರಿ,ಈರುಳ್ಳಿ ಮಳೆಯಾ ಶ್ರೀತ),ಭರಮಸಾಗರ ಹೋಬಳಿ(ಈರುಳ್ಳಿ ನೀರಾವರಿ,ಟೊಮೆಟೊ). ಚಳ್ಳಕೆರೆ ತಾಲೂಕಿನ ಕಸಬಾ,ನಾಯಕನಹಟ್ಟಿ, ಪರುಶುರಾಂಪುರ ಹಾಗೂ ತಳಕು ಹೋಬಳಿಗೆ(ಈರುಳ್ಳಿ ನೀರಾವರಿ, ಟೊಮೆಟೊ)ಹಿರಿಯೂರು ತಾಲೂಕು ಕಸಬಾ ಹೋಬಳಿ(ಈರುಳ್ಳಿ ನೀರಾವರಿ) ಧ ರ್ಮಪುರ ಹೋಬಳಿ(ಈರುಳ್ಳಿ ನೀರಾವರಿ, ಟೊಮೆಟೊ)ಐಮಂಗಲ,ಜೆ.ಜಿ.ಹಳ್ಳಿ ಹೋಬಳಿಗೆ (ಈರುಳ್ಳಿ ನೀರಾವರಿ,ಈರುಳ್ಳಿ ಮಳೆಯಾ ಶ್ರೀತ).
ಹೊಳಲ್ಕೆರೆ ತಾಲೂಕು ರಾಮಗಿರಿ ಹಾಗೂ ತಾಳ್ಯ ಹೋಬಳಿ(ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರೀತ,ಟೊಮೆಟೊ),ಹೊಸ ದುರ್ಗ ತಾಲೂಕು ಕಸಬಾ ಹೋಬಳಿ(ಈರುಳ್ಳಿ ಮಳೆಯಾಶ್ರಿತ, ಟೊಮೆಟೊ,ಕೆಂಪು ಮೆಣಸಿನಕಾಯಿ ಮಳೆಯಾಶ್ರಿತ). ಮೊಳಕಾಲ್ಮೂರು ತಾಲೂಕು ದೇವಸಮುದ್ರ ಹಾಗೂ ಕಸಬಾ ಹೋಬಳಿ(ಈರುಳ್ಳಿ ನೀರಾವರಿ, ಟೊಮೆಟೊ).
ಟೊಮೆಟೊ ವಿಮೆ ಮೊತ್ತ ಹೆಕ್ಟೇರ್‌ಗೆ 141500 ರೂ.ಇದ್ದು,ರೈತರ ವಿಮಾ ಕಂತು 7075 ರೂ.ಇದೆ. ನೀರಾವರಿ ಈರುಳ್ಳಿ ವಿಮೆ ಮೊ ತ್ತ ಹೆಕ್ಟೇರ್‌ಗೆ 80500 ರೂ.,ಕಂತು 4025 ರೂ.,ಮಳೆಯಾಶ್ರೀತ ಈರುಳ್ಳಿ ವಿಮೆ ಮೊತ್ತ ಹೆಕ್ಟೇರ್‌ಗೆ 75750 ರೂ.,ಕಂತು 3787.50 ರೂ.,ಮಳೆಯಾಶ್ರೀತ ಕೆಂಪು ಮೆಣಸಿಕಾಯಿ ವಿಮಾ ಮೊತ್ತ ಹೆಕ್ಟೇರ್‌ಗೆ 78750 ರೂ.,ಕಂತು 3937.50 ಇದೆ.
ವಿಮೆಗಾಗಿ ಬ್ಯಾಂಕ್,ಸಾಮಾನ್ಯ ಸೇವಾ ಕೇಂದ್ರ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ಜುಲೈ 31 ಕೊನೆಯ ದಿನವಾಗಿದೆ. ನೀರಾವರಿ ಆಶ್ರೀತ ಈರುಳ್ಳಿ ಬೆಳೆ ವಿಮೆ ನೊಂದಣಿಗೆ ಜುಲೈ 15 ಕಡೆ ದಿನ. ದಿ ಓರಿಎಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅನ್ನು ವಿಮಾ ಕಂಪನಿಯಾಗಿ ಜಿ ಲ್ಲೆಗೆ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
----------