ಫಲಿತಾಂಶ ಸುಧಾರಣೆಗೆ ಅಕ್ಷರ ಜ್ಯೋತಿಯಾತ್ರೆಯ ಉದ್ದೇಶ

29BLK2
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಮಂಗಳವಾರ ಕರೆದಿದ್ದ ಅಕ್ಷರ ಜ್ಯೋತಿಯಾತ್ರೆ ೨೦೨೪ ಪೂರ್ವಭಾವಿ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಾತನಾಡಿದರು. ಪಂಡಿತ ಬಾಳೂರೆ, ಅಕ್ಷಯ ಸೋಮನಾಥ ಮುದ್ದಾ, ಚಂದ್ರಶೇಖರ ಎಮ್ಮೆ ಇದ್ದರು.
Published on

ಭಾಲ್ಕಿ: ವ್ಯಕ್ತಿತ್ವ ವಿಕಸನದ ಜತೆಗೆ ಫಲಿತಾಂಶ ಸುಧಾರಣೆಯ ಮಾರ್ಗೋಪಾಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಡುವುದೇ ಅಕ್ಷರ ಜ್ಯೋತಿ ಯಾತ್ರೆ-೨೦೨೪ರ ಮೂಲ ಉದ್ದೇಶವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ್ ಹೇಳಿದರು.

ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ಮಂಗಳವಾರ ಕರೆದಿದ್ದ ಅಕ್ಷರ ಜ್ಯೋತಿಯಾತ್ರೆ ೨೦೨೪ ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಗಂಡಾಂತರ ಇರುವುದು ಅವಿದ್ಯಾವಂತರಿಂದಲ್ಲ, ವಿದ್ಯಾವಂತರಿಂದ ಎಂದು ನಮ್ಮ ದಾರ್ಶನಿಕರು ಹೇಳಿದ್ದಾರೆ. ಅದು ಅಕ್ಷರಶಃ ಸತ್ಯ, ಅವಿದ್ಯಾವಂತರು ವಿಮಾನಿನ ಒಂದು ಮೊಳೆ ಕದಿಯಬಲ್ಲರು, ಆದರೆ ವಿದ್ಯಾವಂತರು ವಿಮಾನವನ್ನೇ ಹಾರಿಸಿಕೊಂಡು ಹೋಗಬಲ್ಲರು. ಹೀಗಾಗಿ ವಿದ್ಯಾವಂತರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ, ಮಕ್ಕಳಿಗೆ ವಿದ್ಯೆಯ ಜತೆಗೆ ಪ್ರಾಮಾಣಿಕತೆ, ದೇಶಭಕ್ತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ನ.೭ ರಿಂದ ೨೦೨೫ರ ಜ.೧೦ರವರೆಗೆ ರಾಜ್ಯಾದ್ಯಂತ ಅಕ್ಷರ ಜ್ಯೋತಿ ಯಾತ್ರೆ ೨೦೨೪ ಕಾರ್ಯಕ್ರಮ ಆಯೋಜಿಸಲಾಗಿದ್ದು. ಎಲ್ಲರೂ ಯಶಸ್ಸಿಗೆ ಕೈಜೋಡಿಸಬೇಕು ಎಂದು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕ ಪಂಡಿತ ಬಾಳೂರೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಆರ್. ಪಾಟೀಲ್, ಸಂತೋಷ ಖಂಡ್ರೆ, ಶಿವಾಜಿರಾವ ಮಾನೆ, ಜಯರಾಜ ದಾಬಶೆಟ್ಟಿ, ಅಮರ ಹಲಮಂಡಗೆ, ಶಿವಕುಮಾರ ಘಂಟೆ, ಗುಂಡಪ್ಪ ಸಂಗಮಕರ, ಚಂದ್ರಶೇಖರ ಎಮ್ಮೆ, ನಾಗಶೆಟ್ಟಿ ಚೋಳಾ, ಸಂಜೀವಕುಮಾರ ಜಾಂತೆ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಮುಖರಾದ ಅಕ್ಷಯ ಸೋಮನಾಥ ಮುದ್ದಾ, ಪ್ರವೀಣ ಹಣಮಶೆಟ್ಟಿ, ಸೋಮನಾಥಪ್ಪ ಅಷ್ಟೂರೆ, ಕಿಶನರಾವ ಜಾಧವ್ ಇತರರಿದ್ದರು. ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ದೀಪಾವಳಿ ಸ್ವಾಗತ ಪ್ರದರ್ಶನ ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಪಂಡಿತ ಕಲ್ಯಾಣರಾವ ಸ್ವಾಗತಿಸಿದರು. ಗುಂಡಪ್ಪ ಎಸ್. ನಿರೂಪಣೆ ಮಾಡಿದರು. ಶಂಭುಲಿಂಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net