ಫಲಿತಾಂಶ ಸುಧಾರಣೆ ಕಾರ್ಯಾಗಾರ

3BK3
Published on

ಬಸವಕಲ್ಯಾಣ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ವಿಷಯವಾರು ಕಾರ್ಯಾಗಾರಗಳನ್ನು ಪರಿಣಾಮಕಾರಿ ಆಗಿ ನಡೆಸಬೇಕು ಎಂದು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಖ್ ಮಹೆಬೂಬ್ ಪಟೇಲ್ ಹೇಳಿದರು.
ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬಸವಕಲ್ಯಾಣ ಹಾಗೂ ಹುಲಸೂರ ಘಟಕಗಳ ಆಶ್ರಯದಲ್ಲಿ ವಿಕಾಸ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ೨೨ ನಾಮ ನಿರ್ದೇಶಿತ ಸದಸ್ಯರ ಹಾಗೂ ೨೯ ಶಾಲಾ ಪ್ರತಿನಿಧಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ಅಧ್ಯಕ್ಷರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಮಾದರಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮಾಲಿ ಪಾಟೀಲ್ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳು ಸಹಕಾರ ಮನೋಭಾವದಿಂದ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರ್ ಬಾಪೂರೆ, ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಸುರೇಂದ್ರನಾಥ ಹುಡುಗಿಕರ್, ಜಿಲ್ಲಾ ಶಿಕ್ಷಣಾಧಿಕಾರಿ ಸಂಘದ ಕಾರ್ಯðದರ್ಶಿ ಸೂರ್ಯಕಾಂತ ಪಾಟೀಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜೀತೇಂದ್ರ ಬಿರಾದಾರ, ಭಾಲ್ಕಿ ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ್, ಎಸ್ಸಿ/ಎಸ್ಟಿ ಮಾಧ್ಯಮಿಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಪದವಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಬಿರಾದಾರ ಮಾತನಾಡಿದರು.
ಯೋಗರಾಜ ಕೆ. ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಅಡಕೆ ಪ್ರಾಸ್ತಾವಿಕ ಮಾತನಾಡಿದರು. ಪದಗ್ರಹಣ ಮಾಡಿದ ೨೨ ನಾಮ ನಿರ್ದೇಶಿತ ಸದಸ್ಯರು ಹಾಗೂ ೨೯ ಶಾಲಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಭೀಮಾಶಂಕರ ಆದೆಪ್ಪ, ಸಂತೋಷ ಅಕ್ಕಣ್ಣ, ರಾಜಪ್ಪ ನಂದೋಡೆ, ಬಾಲಾಜಿ ಚಂಡಕಾಪುರೆ, ಗೋವಿಂದ ಚಾಮಲ್ಲೆ, ರಮಾಕಾಂತ, ನಾಗರೆಡ್ಡಿ, ಅರ್ಜುನ ಸೀತಾಳಗೆರೆ, ಬಸವರಾಜ ರೋಹಿಲೆ, ಉದ್ದವರಾವ ಉಪಾಸೆ, ಮದನಕುಮಾರ ಪಾಟೀಲ್, ಉಷಾ ಬಂದೆ, ಅಶೋಕ ಚವ್ಹಾಣ್, ವಿನೋದ ರಾಠೋಡ, ಮಾಧವ, ವಸಂತರೆಡ್ಡಿ, ವೀರೇಶ ಹೆಗ್ಗೆ ಇತರರಿದ್ದರು.
ಉಪಾಧ್ಯಕ್ಷ ಪ್ರಕಾಶ ವಾಡೇಕರ್ ಸ್ವಾಗತಿಸಿದರು. ವಿಜಯಕುಮಾರ ಮಾನೆ ವಂದಿಸಿದರು. ಸುನಿತಾ ರೆಡ್ಡಿ ಮತ್ತು ಬಸವರಾಜ ಮಾನೋಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net