ಫಲಿತಾಂಶ ಕುಸಿತಕ್ಕೆ ಹೊಣೆ ಹೊರುವೆ

Priyank
ಪ್ರಿಯಾಂಕ್ ಖರ್ಗೆ, ಸಚಿವ
Published on

ಕಲಬುರಗಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಲಿತಾಂಶ ಕುಸಿದಿದ್ದು, ಅದರ ಹೊಣೆ ಹೊರುವುದರಲ್ಲಿ ಹಿಂಜರಿಕೆ ಇಲ್ಲ. ಪಟ್ಟಿಯಲ್ಲಿ ಕೊನೇ ಸ್ಥಾನ ಇರಬಹುದು. ಆದರೆ ಕಳೆದ ರ‍್ಷಕ್ಕಿಂತ ಶೇ.೮ ಲಿತಾಂಶ ಹೆಚ್ಚಿದ್ದು, ಗುಣಮಟ್ಟದ ಶಿಕ್ಷಣಕ್ಕೆ ನೀಲ ನೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಹೇಳಿದರು.

ಜಿಲ್ಲೆ ಸೇರಿ ಕಲ್ಯಾಣ ರ‍್ನಾಟಕದ ಶೈಕ್ಷಣಿಕ ಪರಿಸ್ಥಿತಿ ಕುರಿತು ತಲೆ ತಗ್ಗಿಸುವಂತ ಸ್ಥಿತಿ ಇದೆ. ಮುಂಚೆಯಿಂದಲೂ ನಾವುಗಳು ಓದಿನಲ್ಲಿ ನಮ್ಮ ಪ್ರದೇಶ ಹಿಂದಿದೆ. ಕೇಂದ್ರ ರ‍್ಕಾರದ ಎಎಸ್​ಆರ್​ಇ ವರದಿಯಲ್ಲೂ ನಮ್ಮ ಪ್ರದೇಶ ಶಿಕ್ಷಣ ಕಲಿಕೆಯಲ್ಲಿ ಹಿಂದಿದೆ ಎಂದು ವರದಿ ಬಂದಾಗ ಸುಮಾರು ೧೦ ತಿಂಗಳ ಹಿಂದೆಯೇ ಸೂಚಿಸಿ, ಬದಲಾವಣೆಗೆ ತಿಳಿಸಿದ್ದೆ. ಸದ್ಯ ಬಂದಿರುವ ಲಿತಾಂಶ ತೃಪ್ತಿ ತಂದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಒಳ ಮೀಸಲಾತಿಯ ಹಿನ್ನೆಲೆ ಶಿಕ್ಷಕರ ನೇಮಕ ಸೇರಿ ಎಲ್ಲ ನೇಮಕ ಸ್ಥಗಿತವಾಗಿವೆ. ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಜತೆ ರ‍್ಚಿಸಲಾಗುವುದು. ಶಿಕ್ಷಣ ಇಲಾಖೆ ಮುಖ್ಯ ಕರ‍್ಯರ‍್ಶಿ ಹಾಗೂ ಅಪರ ಕರ‍್ಯರ‍್ಶಿ ಜತೆ ಮಾತನಾಡಿ ಮುಂದಿನ ಶೈಕ್ಷಣಿಕ ರ‍್ಷದ ನೀಲ ನಕ್ಷೆ ತಯಾರಿಸಲು, ಪರೀಕ್ಷೆ ಕುರಿತು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಕೆಕೆಆರ್​ಡಿಬಿಯಿಂದ ಅಕ್ಷರರ ಆವಿಷ್ಕಾರ, ಕಲಿಕಾಸರೆ ಪುಸ್ತಕ ನೀಡುವುದು, ಶಾಲೆಗಳ ಮೂಲ ಸೌರ‍್ಯ, ಕೆಲವು ತರಬೇತಿ ಕೆಲಸ ಮಾಡಲಾಗಿದೆ. ಕೆಕೆಆರ್​ಡಿಬಿಯಿಂದ ಮುಂದಿನ ರ‍್ಷದಲ್ಲಿ ಕೌಶಲ ಅಭಿವೃದ್ಧಿಗೆ ಪ್ರತಿ ಕ್ಷೇತ್ರಕ್ಕೂ ಹಣ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಇದಕ್ಕೂ ಮೀರಿ ಕೆಲಸ ಮಾಡಬೇಕಾದ ಅನಿವರ‍್ಯತೆ ಇದೆ. ಪ್ರಸಕ್ತ ರ‍್ಷ ಶ್ರೀ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಹೇಳಿದರು.

ಕಲ್ಯಾಣ ರ‍್ನಾಟಕ ಎಲ್ಲ ಶಾಲೆಗಳಲ್ಲಿ ಶಿಕ್ಷಕರಿಗೆ ಬಯೋಮೆಟ್ರಿಕ್​ ಹಾಜರಾತಿ ಕಡ್ಡಾಯ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಅದಕ್ಕೆ ತಗಲುವು ೭೦&೮೦ ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯಿತಿಯಿಂದ ಬಳಕೆ ಮಾಡಲು ನೋಡಲಾಗುತ್ತಿದೆ. ಇದರ ಅವಶ್ಯಕತೆ ಇದ್ದರೆ ಶ್ರೀ ಜಾರಿ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net