ಫಲಿತಾಂಶ ಉತ್ತಮಗೊಳಿಸಲು ಪಾಲಕರೊಂದಿಗೆ ಸಭೆ

BTP14Photo1
ಬೆಟ್ಟದಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ಹಮ್ಮಿಕೊಂಡಿದ್ದ ವಿಶೇಷ ಪಾಲಕರ ಸಭೆಯಲ್ಲಿ ಉಪಪ್ರಾಂಶುಪಾಲ ಬಿ.ಎಸ್.ರೇವಣ್ಣ ಮಾತನಾಡಿದರು. ಮೀನಾಕುಮಾರಿ, ಮೋಹನ್‌ಕುಮಾರ್, ಜ್ಯೋತಿ, ಮಮತಾ, ನಿಂಗರಾಜು, ರೂಪಾಕುಮಾರಿ, ಅಮಿತ್ ಇದ್ದರು.
Published on

ಬೆಟ್ಟದಪುರ: ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರಿಗಿಂತ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ಎಸ್.ರೇವಣ್ಣ ತಿಳಿಸಿದರು.


ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಪಾಲಕರ ಸಭೆ ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿಗಳಿಗೆ ಕಲಿಕೆ ನಿರಂತರವಾದುದು. ಅದಕ್ಕಾಗಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಮೇಲೆತ್ತಲು ಪ್ರತಿನಿತ್ಯ 9 ಗಂಟೆಗೆ ವಿಶೇಷ ತರಗತಿ ಆರಂಭಿಸಲಾಗಿದೆ. ಪಾಲಕರು ಪ್ರತಿನಿತ್ಯ ಮಕ್ಕಳ ಓದುವ ವಿಚಾರದಲ್ಲಿ ಗಮನ ಹರಿಸಬೇಕೆಂದು ಮನವಿ ಮಾಡಿದರು.


ಉತ್ತಮ ಫಲಿತಾಂಶಕ್ಕಾಗಿ ಹಾಕಿಕೊಂಡಿರುವ ರೂಪುರೇಷೆಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮೀನಾಕುಮಾರಿ, ಶಿಕ್ಷಕರಾದ ಮೋಹನ್‌ಕುಮಾರ್, ಜ್ಯೋತಿ, ಮಮತಾ, ನಿಂಗರಾಜು, ರೂಪಾಕುಮಾರಿ, ದೇವಯ್ಯನಾಯಕ, ಅಮಿತ್ ಸೇರಿದಂತೆ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net