ಫಲಾನುಭವಿಗೆ ವಾತ್ಸಲ್ಯಮನೆ ಹಸ್ತಾಂತರ

28 HBD 1
 ಚಿಟಗುಪ್ಪ ತಾಲೂಕಿನ ಕೊಡಂಬಲದಲ್ಲಿ ಮಾಶಾಸನ ಫಲಾನುಭವಿ ಕಾಶಮ್ಮ ಚಂದ್ರಪ್ಪ ಅವರಿಗೆ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯಮನೆ ಹಸ್ತಾಂತರಿಸಲಾಯಿತು. ವೈಜಪ್ಪ ಭೋಸಗಿ, ಬಸವರಾಜ, ನರಸಪ್ಪ ಪತ್ಮಾಪುರ, ಅಸ್ಲಾಂಮಿಯಾ ಇತರರಿದ್ದರು.
Published on

ಚಿಟಗುಪ್ಪ: ಕೊಡಂಬಲ ಗ್ರಾಮದ ಮಾಶಾಸನ ಫಲಾನುಭವಿ ಕಾಶಮ್ಮ ಚಂದ್ರಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಿಸಿ ಗುರುವಾರ ಹಸ್ತಾಂತರಿಸಲಾಯಿತು.

ತಾಲೂಕು ಯೋಜನಾಧಿಕಾರಿ ಬಸವರಾಜ ಮನೆ ಹಸ್ತಾಂತರಿಸಿ ಮಾತನಾಡಿ, ವಸತಿ ರಹಿತ ನಿರ್ಗತಿಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆನಿಂದ ಮನೆ ನಿರ್ಮಾಣ ಮಾಡಿ ಅವರ ಕನಸಿನ ಸೂರು ಕಟ್ಟಿಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸಂಗಮೇಶ ಜವಾದಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ರೀತಿಯಲ್ಲಿ ಜನರಿಗೆ ಅನುಕೂಲ ಕಲ್ಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವ ರೀತಿಯಲ್ಲಿ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ವೈಜಪ್ಪ ಭೋಸಗಿ, ಜನಜಾಗೃತಿ ವೇದಿಕೆ ಸದಸ್ಯರಾದ ನರಸಪ್ಪ ಪತ್ಮಾಪುರ, ಅಸ್ಲಾಂಮಿಯಾ ಇತರರಿದ್ದರು. ಸಮನ್ವಯಾಧಿಕಾರಿ ಶೋಭ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net