ಫಲಾನುಭವಿಗೆ ಪರಿಹಾರ ಧನದ ಆದೇಶ ಪತ್ರ ವಿತರಣೆ

27-kollegal-4,,,,,,,,
ಮಳೆಯಿಂದ ಹಾನಿಯಾಗಿ ಮನೆ ಕಳೆದುಕೊಂಡಿದ್ದ ಪಟ್ಟಣದ ನೂರ್‌ಮೊಹಲ್ಲಾ ಅನ್ವರ್ ಪಾಷ ಅವರಿಗೆ ಬುಧವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ 1.20. ಲಕ್ಷ ರೂ. ಪರಿಹಾರ ಧನದ ಆದೇಶ ಪತ್ರವನ್ನು ವಿತರಿಸಿದರು. ಬಸವರಾಜು, ಅನ್ಸರ್ ಬೇಗ್ ಇತರರು ಇದ್ದಾರೆ.
Published on

ಕೊಳ್ಳೇಗಾಲ: ಪಟ್ಟಣದ ನೂರ್‌ಮೊಹಲ್ಲಾ ಬಡಾವಣೆಯಲ್ಲಿ ಇತ್ತೀಚೆಗೆ ಅಕಾಲಿಕ ಮಳೆ ಹಾಗೂ ಗಾಳಿಗೆ ಮನೆಯೊಂದು ಕುಸಿದಿದ್ದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಮನೆ ಕಳೆದುಕೊಂಡ ಸಂತ್ರಸ್ತ ಪಟ್ಟಣದ ನೂರ್‌ಮೊಹಲ್ಲಾ ಬಡಾವಣೆಯಲ್ಲಿ ಅನ್ವರ್‌ಪಾಷ ಅವರಿಗೆ 1.20. ಲಕ್ಷ ಪರಿಹಾರ ಧನದ ಆದೇಶ ಪತ್ರವನ್ನು ಬುಧವಾರ ವಿತರಿಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಇತ್ತೀಚೆಗೆ ನೂರ್ ಮೊಹಲ್ಲಾ ಬಡಾವಣೆಯಲ್ಲಿ ನೀರು ಕಲುಷಿತವಾಗಿ ವಾಂತಿ, ಭೇದಿ ನಿವಾಸಿಗಳಿಗೆ ಕಾಣಿಸಿಕೊಂಡಿದೆ ಎಂಬ ದೂರಿನ ಅನ್ವಯ ತಹಸೀಲ್ದಾರ್ ಬಸವರಾಜು ಅವರು ವಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಕಾಲಿಕ ಮಳೆ ಹಾಗೂ ಗಾಳಿಯಿಂದ ಅನ್ವರ್ ಪಾಷ ಅವರ ಮನೆ ಸಂಪೂರ್ಣ ಶಿಥಿಲಗೊಂಡಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಪರಿಶೀಲಿಸಿ ಸಂತ್ರಸ್ತರಿಗೆ ನೆರವು ನೀಡುವಂತೆ ತಹಸೀಲ್ದಾರ್ ಬಸವರಾಜುಗೆ ಸೂಚಿಸಲಾಗಿತ್ತು. ಅಂತೆಯೆ, ಇಂದು ಮನೆ ಮಾಲೀಕನಿಗೆ ಪರಿಹಾರ ಧನದ ಆದೇಶ ಪ್ರತಿ ನೀಡಲಾಗಿದೆ. ಈ ಹಣ ಎನ್.ಡಿ.ಆರ್.ಎಫ್ ಮೂಲಕ ಖಾತೆಗೆ ಜಮೆಯಾಗಲಿದೆ ಎಂದರು.

ಕಾಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಮರಿಸ್ವಾಮಿ, ತಹಸೀಲ್ದಾರ್ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಬ್ಲಾಕ್ ಅಧ್ಯಕ್ಷ ಮನ್ಸೂರ್ ಪಾಷ, ಉಪಾಧ್ಯಕ್ಷ ಮೊಹಮ್ಮದ್ ಇಂದಾದ್ ಉಲ್ಲಾ, ಮುಖಂಡ ಅನ್ಸರ್ ಬೇಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net