

ಹುಮನಾಬಾದ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷಿö ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಮಹಿಳೆಯರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಜ್ಯೋತಿ ಯೋಜನೆಯ ಮೈಸೂರಿನಲ್ಲಿ ನಡೆಯುವ ಉದ್ಘಾಟನೆಯ ನೇರ ಪ್ರಸಾರ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ಗೃಹ ಲಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಲಾಭ ಪಡೆಯಬೇಕು ಎಂದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶಿವಪುರಗಲ್ಲಿ, ಶ್ರೀ ಹನುಮಾನ ದೇವಸ್ಥಾನ, ಕೋಳಿವಾಡ ಬಡಾವಣೆಯ ಅಂಗನವಾಡಿ ಕೇಂದ್ರ, ವಾಂಜರಿಗಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತ ಹಾಗೂ ಗಾಂಧಿ ನಗರದ ಅಂಗನವಾಡಿ ಕೇಂದ್ರ ಬಳಿ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಫ್ಸರ್‌ಮಿಯ್ಯ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಕಾರ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಮಗಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷö್ಮಣರಾವ ಬುಳ್ಳಾ, ಪ್ರಮುಖರಾದ ಬಾಬುರಾವ ಟೈಗರ, ಸುರೇಶ ಘಾಂಗ್ರೆ, ದತ್ತಕುಮಾರ ಚಿದ್ರಿ ಪ್ರಭು ತಾಳಮಡಗಿ, ಜಾಫರ್, ಲಕ್ಷö್ಮಣ ಹಣಕುಣಿ, ಮಹೇಶ ಅಗಡಿ, ಮಹಿಳಾ ಓಬಿಸಿ ಘಟಕ ಅಧ್ಯಕ್ಷೆ ಸುಮಿತ್ರಾ, ಗುಂಡುರೆಡ್ಡಿ ಪುಟಕಾಕ್ಷಿ, ಶಿವರಾಜ ಸಿಂಧನಕೇರಾ, ವೀರಣ್ಣ ದರ್ಗೆ, ಖುರ್ಷಿದ್ ಖಾನ್, ರಹಿಂ ಮೆಡಿಕಲ್ ಇತರರಿದ್ದರು.