

ಕೊರಟಗೆರೆ: ಜಿಲ್ಲೆಯ 25 ಸಾವಿರ ನಿರಾಶ್ರಿತರಿಗೆ ಮಾರ್ಚ್ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಿವೇಶನ ವಿತರಣಾ ಕಾರ್ಯಕ್ರಮಕ್ಕೆ ಎಲ್ಲರೂ ಸಜ್ಜಾಗಬೇಕು. ಯಾವುದೇ ತಾಂತ್ರಿಕೆ ತೊಂದರೆಯಿಲ್ಲದ ಎಲ್ಲ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಆಶ್ರಯ ಯೋಜನೆ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಮೊದಲಿಗೆ 50 ಸಾವಿರ ನಿವೇಶನ ನೀಡುವ ಯೋಜನೆಯಿತ್ತು. ಈಗ 25ಕ್ಕೆ ನಿಗದಿಯಾಗಿದ್ದು, ತಾಪಂ ಇಒ ಮತ್ತು ತಹಸೀಲ್ದಾರ್ ಶೀಘ್ರ ಕ್ರಮ ವಹಿಸಿ ಕೆಲಸ ಮಾಡಬೇಕು ಎಂದರು.
ಕಳೆದ ಬಾರಿ ಎಸ್ಎಸ್ಎಲ್ಸಿ ಲಿತಾಂಶದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ 30 ಸ್ಥಾನದಲ್ಲಿ ಇದ್ದ ಬಗ್ಗೆ ಡಿಡಿಪಿಐ ಮತ್ತು ಬಿಇಒರಿಂದ ಮಾಹಿತಿ ಪಡೆದ ಗೃಹ ಸಚಿವರು, ನಾವು ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡುವ ಅಧಿಕಾರ ನಮಗೆ ಇಲ್ಲ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಬಹುದೊಡ್ಡ ತಿರುವುಗಳಾಗಿದೆ. ಇದರಲ್ಲಿ ವಿದ್ಯಾರ್ಥಿಯನ್ನು ಉತ್ತೀರ್ಣನನ್ನಾಗಿ ಮಾಡಲು ಕೈಗೊಳ್ಳಬೇಕಾದ ಕ್ರಮ ಮತ್ತು ಸಿದ್ಧತೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ವಿದ್ಯಾರ್ಥಿ ಅನುತೀರ್ಣನಾದರೆ ಅವನ ಶೈಕ್ಷಣಿಕ ಬದುಕು ಗ್ರಾಮಾಂತರ ಪ್ರದೇಶದಲ್ಲಿ ಮುಗಿಯಲಿದೆ. ಯಾವುದಾದರೂ ಕೂಲಿ ಕಾರ್ಮಿಕನಾಗಿಬಿಡುತ್ತಾನೆ ಎಚ್ಚರಿಕೆಯಿಂದ ರಾಜ್ಯದಲ್ಲಿ ಉತ್ತಮ ಸ್ಥಾನದಲ್ಲಿ ಜಿಲ್ಲೆ ಬರುವಂತೆ ಮಾಡಬೇಕು ಎಂದು ಆದೇಶಿಸಿದರು. ಹೆಚ್ಚು ಪೊಲೀಸ್ ಆಯುಕ್ತ ಖಾದರ್, ಗೃಹ ಸಚಿವರ ವಿಶೇಷಾಧಿಕಾರಿ ಡಾ. ನಾಗಣ್ಣ, ತಹಸೀಲ್ದಾರ್ ಕೆ.ಮಂಜುನಾಥ್, ತಾಪಂ ಇಒ ಅಪೂರ್ವ ಅನಂತರಾಮು, ಪಪಂ ಅಧ್ಯಕ್ಷೆ ಅನಿತಾ ಇದ್ದರು.
ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಿಗೆ ತಿಳಿಸಿದ ಮಾಹಿತಿಯಂತೆ ಪಟ್ಟಣವನ್ನು ಸುತ್ತುವರಿದಿರುವ 4 ಗ್ರಾಪಂ ವ್ಯಾಪ್ತಿಯ 15 ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಗೆ ಈ ಹಿಂದೆ ಪ್ರಸ್ತಾನೆ ಸಲ್ಲಿಸಲಾಗಿತ್ತು. ಆದರೆ ಪುರಸಭೆಯಾಗಲು ಇರುವ ನಿಯಮದ ಪ್ರಕಾರ ಹಲವು ನೂನ್ಯತೆಗಳು ಇದ್ದವು. ಪ್ರಸ್ತಾಪನೆ ಮರು ಪರಿಶೀಲಿಸುವಂತೆ ತಿಳಿಸಲಾಗಿದ್ದು, ಇನ್ನೂ ಪಪಂ ಪುರಸಭೆಯಾಗಿ ಪರಿವರ್ತನೆಯಾಗುವ ಕಾಲ ಶ್ರೀ ಕೂಡಿಬರಬೇಕಿದೆ. ಇನ್ನು ತಾಲೂಕು ಕೇಂದ್ರದಲ್ಲಿನ ತಾಲೂಕು ಕಚೇರಿ ಕಟ್ಟಡ ಹಿನಾಯ ಸ್ಥಿತಿಯಲ್ಲಿದೆ. ಶೀಘ್ರ ಕಟ್ಟಡ ದುರಸ್ತಿಯಾಗಬೇಕಾಗಿದೆ. ನನ್ನ ಕ್ಷೇತ್ರದಲ್ಲಿ ಈ ರೀತಿ ಇರಬಾರದು. ಶೀಘ್ರ ಪಿಡಬ್ಲ್ಯುಡಿ ಇಲಾಖೆ ದುರಸ್ತಿಗೆ ಕ್ರಮ ಕೈಗೊಳ್ಳಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಪರಮೇಶ್ವರ ಸೂಚನೆ ನೀಡಿದರು. ಪಂಚಾಯತ್ ರಾಜ್ ಇಲಾಖೆಯಲ್ಲಿ ತಾಲೂಕಿನಲ್ಲಿ ಕೈಗೊಳ್ಳುತ್ತಿರುವ ಹಲವು ಕಾಮಗಾರಿಗ ಮಾಹಿತಿಯನ್ನು ಸಮರ್ಪಕವಾಗಿ ದಾಖಲೆಗಳಲ್ಲಿ ನೀಡಿದ ತಾಪಂ ಇಒ ಅಪೂರ್ವ ಅನಂತರಾಮು ಅವರ ವಿರುದ್ಧವೂ ಸಚಿವರು ಅಸಮಾಧಾನ ಹೊರ ಹಾಕಿದರು.
ತಾಲೂಕಿನಲ್ಲಿ 466 ಜೆಜೆಎಂ ಕಾಮಗಾರಿಗಳಲ್ಲಿ 87 ಮಾತ್ರ ಪೂರ್ಣಗೊಂಡಿದ್ದು, ಇನ್ನೂ 2.5 ಕೋಟಿ ಹಣ ಖರ್ಚು ಮಾಡಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಶೇ.55ಹಣ ನೀಡುತ್ತಿದೆ 200 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳುತ್ತಿದ್ದು, ಮಾರ್ಚ್ -15ರೊಳಗೆ 150ಕ್ಕೂ ಹೆಚ್ಚು ಕಾಮಗಾರಿ ಮುಗಿಯಬೇಕು. 6 ತಿಂಗಳಲ್ಲಿ ಜೆಜೆಎಂ ಕಾಮಗಾರಿಗಳನ್ನೇಲಾ ಮುಗಿಸುತ್ತೇವೆ ಎಂದು ನನಗೆ ಲಿಖಿತ ರೂಪದಲ್ಲಿ ಬರೆದುಕೊಡಿ. ನನಗೆ ನಿಮ್ಮ ಮೌಖಿತ ಉತ್ತರ ಬೇಡ ದಾಖಲೆಯಲ್ಲಿ ಬೇಕು ಎಂದು ಗೃಹ ಸಚಿವರ ಜೆಜೆಎಂ ಇಂಜಿನಿಯರ್ ವಿರುದ್ಧ ಗುಡುಗಿದರು.
ತುಮಕೂರು ತಾಲೂಕಿನ ಮತ್ತು ಮಧುಗಿರಿ ತಾಪಂ ಇಒ ಒಮ್ಮೆಯೂ ನನ್ನ ಬಂದು ಭೇಟಿ ಮಾಡಿಲ್ಲ. ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಾ ನೆನಪಿರಲಿ. ನಾನು ಜಿಲ್ಲಾ ಉಸ್ತುವಾರಿ ಸಚಿವ. ಇಡೀ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ನನಗೆ ಬೇಕು ಸರಿಯಾಗಿ ಕೆಲಸ ಮಾಡುವುದಾರೆ ಮಾಡಿ ಇಲ್ಲದಿದ್ದರೆ ಸರಿಯಿರಲ್ಲ.| ಡಾ.ಜಿ ಪರಮೇಶ್ವರ ಗೃಹ ಸಚಿವಜಿಲ್ಲೆಯಲ್ಲಿಯೇ ಕೊರಟಗೆರೆಯನ್ನು ಮಾದರಿಯ ರೀತಿ ನರೇಗಾ ಯೋಜನೆ ನಡೆಯುತ್ತಿದ್ದು, ಶಾಲಾ ಕಟ್ಟಡ, ಆಟದ ಮೈದಾನ, ಕಾಂಪೌಡ್ ನಿಮಾರ್ಣ ಮಾಡಲಾಗಿದೆ. ಕೊರಟಗೆರೆ ಮಾದರಿಯಲ್ಲಿಯೇ ಎಲ್ಲ ತಾಲೂಕಿನಲ್ಲಿ ನರೇಗಾ ಕಾಮಗಾರಿ ಅನುಷ್ಠಾನ ಮಾಡಲಾಗುವುದು.| ಡಾ.ಪ್ರಭು ಜಿಲ್ಲಾ ಪಂಚಾಯಿತಿ ಸಿಇಒ