ಫಲವತ್ತಾದ ಜಾಗದಲ್ಲಿ ಸಸಿ ನೆಡುವುದು ಅತ್ಯಗತ್ಯ

25BTP05
ಹಾರನಹಳ್ಳಿ ಗ್ರಾಮದ ರೈತ ಕೆ.ಟಿ ನಾಗೇಂದ್ರ ಅವರ ತೋಟದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅಡಗೂರು ಸುಪ್ರೀತ್ ಮಾತನಾಡಿದರು.
Published on

ಬೆಟ್ಟದಪುರ: ಅಡಕೆ ಹಾಗೂ ತೆಂಗು ಬೆಳೆ ಬೇಸಾಯಕ್ಕೆ ಉತ್ತಮ ಹಾಗೂ ಗುಣಮಟ್ಟದ ಸಸಿಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ತೋಟಗಾರಿಕೆ ಇಲಾಖೆ ವಿಜ್ಞಾನಿ ಸಿದ್ದಪ್ಪ ಹೇಳಿದರು.

ಸಮೀಪದ ಹಾರನಹಳ್ಳಿ ಗ್ರಾಮದ ರೈತ ಕೆ.ಟಿ.ನಾಗೇಂದ್ರ ಅವರ ತೋಟದಲ್ಲಿ ಭೂತಾಯಿ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಗುರುವಾರ ಅಡಕೆ ಮತ್ತು ತೆಂಗು ಬೆಳೆಯ ಕುರಿತು ಆಯೋಜಿಸಿದ್ದ ತರಬೇತಿ ಮತ್ತು ತೋಟಗಾರಿಕೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫಲವತ್ತಾದ ಜಾಗದಲ್ಲಿ ಸಸಿ ನೆಟ್ಟು ನಿಗದಿತ ಸಮಯಕ್ಕೆ ನೀರು ಮತ್ತು ಸಾವಯವ ಗೊಬ್ಬರ ಹಾಕಬೇಕು. ಮಗುವಿನ ಆರೈಕೆ ರೀತಿಯಲ್ಲಿ ಸಸಿಗಳನ್ನು ಪೋಷಣೆ ಮಾಡಿದರೆ ಮಾತ್ರ ಉತ್ತಮ ತೆಂಗು ಹಾಗೂ ಅಡಕೆ ಫಲ ಪಡೆಯಲು ಸಾಧ್ಯ ಎಂದರು.

ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತು ಹಾಗೂ ಸಹಾಯಧನಗಳ ಬಗ್ಗೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಪ್ರಸಾದ್ ಮಾಹಿತಿ ನೀಡಿದರು.

ಭೂತಾಯಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಅಡಗೂರು ಸುಪ್ರೀತ್, ನಿರ್ದೇಶಕ ರಾಮೇಗೌಡ, ತೋಟಗಾರಿಕೆ ಇಲಾಖೆ ಕ್ಷೇತ್ರಾಧಿಕಾರಿ ಶಂಕರಲಿಂಗಪ್ಪ, ಶ್ರೀಧರ್, ಸಂಸ್ಥೆಯ ಸಿಇಒ ಅವಿನಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net