

ಕೊಡೇಕಲ್: ಬಿತ್ತನೆ ನಂತರ ಮಳೆಯಾಗದ ಕಾರಣ ಒಣ ಗಾಳಿಗೆ ನಲುಗುತ್ತಿದ್ದ ಬೆಳೆಗಳಿಗೆ ಮಂಗಳವಾರ ಮಧ್ಯಾಹ್ನ ಸುರಿದ ಆರಿದ್ರಾ ಮಳೆಗೆ ಬೆಳೆಗಳು ಜೀವ ತುಂಬಿಕೊAಡಿದ್ದು, ಮಳೆಯಾಗಲಿ ಎಂದು ರೈತರು ಸೋಮವಾರ ಪ್ರಾರ್ಥಿಸಿ ಗಲೀಫ್‌ಗುಂಡ (ಬಾವಿಯನ್ನು) ಸ್ವಚ್ಛಗೊಳಿಸಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕೊಡೇಕಲ್ ಬಸವಣ್ಣನವರ ವಸ್ತç ತೊಳೆಯಲು ಬಳಸುತ್ತಿದ್ದ ಬಾವಿಯೇ ಗಲೀಫ್‌ಗುಂಡ. ಮಳೆಯಾಗದೆ ಹೋದಾಗ ಈ ಬಾವಿ ಸ್ವಚ್ಛಗೋಳಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮದ ರೈತರಿಗಿದ್ದು, ಅದರಂತೆ ಬಿತ್ತನೆ ನಂತರ ಮಳೆಯಾಗದ ಕಾರಣ ಗಾಳಿಗೆ ಬೆಳೆಗಳು ನಲುಗುವಂತೆ ಮಾಡಿತ್ತು. ಹೀಗಾಗಿ ಆತಂಕಗೊAಡ ರೈತರು ಸೋಮವಾರ ಗಲೀಫ್‌ಗುಂಡ(ಬಾವಿ)ಯನ್ನು ಒಂದಿಚು ಬಿಡದೆ ಸ್ವಚ್ಛಗೊಳಿಸಿ ಬಾವಿ ಸುತ್ತ ಗೋಡೆಗೆ ಸುಣ್ಣ ಹಚ್ಚಿ ನಂತರ ಬಾವಿಯಲ್ಲಿ ಬಂದ ಶುದ್ಧ ನೀರಿನಿಂದ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವ ಮೂಲಕ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಪ್ರಯತ್ನದ ಫಲದಿಂದ ಮಂಗಳವಾರ ಮಧ್ಯಾಹ್ನ ಮಳೆ ಸುರಿದಿದ್ದರಿಂದ ಬೆಳೆಗಳಿಗೆ ಜೀವಕಳೆ ಬಂದAತಾಗಿದೆ. ಒಟ್ಟಿನಲ್ಲಿ ಮಳೆಯಾಗದಿದ್ದರೆ ಗಲೀಫ್‌ಗುಂಡ ಸ್ವಚ್ಛಗೊಳಿಸಿದರೆ ಮಳೆಯಾಗುತ್ತದೆ ಎಂಬ ಪ್ರತೀತಿ ಈಗಲೂ ರೈತರಲ್ಲಿ ಮನೆ ಮಾಡಿದೆ.