ಫರಹತಾಬಾದ್ ಬಳಿ ದಾಖಲೆ ಇಲ್ಲದ 1 ಕೋಟಿ ರೂ ಜಪ್ತಿ

IMG-20230331-WA0013
Published on

ಕಲಬುರಗಿ: ಫರಹತಾಬಾದ್ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆ‌ಇಲ್ಲದೆ ಸಾಗಾಟ ಮಾಡ್ತಿದ್ದ1 ಕೋಟಿ ರೂ ನಗದು ಹಣ ಜಪ್ತಿ ಮಾಡಲಾಗಿದೆ.

ಕಲಬುರಗಿ ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರಗೊಳಪಡುವ ಫರಹತಾಬಾದ ಬಳಿ, ಯಾವುದೇ ದಾಖಲೆಯಿಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದ ರವಿ ಮುಡಬೂಳ ಕಾರು ತಪಾಸಣೆ ಮಾಡಿದಾಗ 1 ಕೋಟಿ ರೂ ನಗದು ಹಣ ಪತ್ತೆಯಾಗಿದೆ.

ಹಣ ಮತ್ತು ರವಿ ಮುಡಬೂಳನನ್ನ ವಶಕ್ಕೆ ಪಡೆಯಲಾಗಿದೆ. ರವಿ ಮುಡಬೂಳ ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿಯಾಗಿದ್ದು, ಕಲಬುರಗಿಯಿಂದ ಜೇವರ್ಗಿ ಕಡೆ ಕಾರಿನಲ್ಲಿ ಹೊರಟಿದ್ದರು.

ಹಣ ಎಲ್ಲಿಂದ ಎಲ್ಲಿಗೆ ಮತ್ತು ಯಾತಕ್ಕಾಗಿ ಸಾಗಾಟ ಮಾಡಲಾಗ್ತಿದ್ದು ಅನ್ನೊದ್ರೆ ಬಗ್ಗೆ ತನಿಖೆ ನಡೆಸುತ್ತಿದ್ದು, ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net