ಫನ್ ಫೇರ್ ಫೆಸ್ಟಿವಲ್ ಉದ್ಘಾಟನೆ

22-1
ವೃಂದಾವನ ಎಕ್ಸಿಬಿಷನ್ ವತಿಯಿಂದ ನಗರದ ಸಿಪಿಇಡಿ ಮೈದಾನದಲ್ಲಿ ಫನ್ ಫೇರ್ ಫೆಸ್ಟಿವಲ್ ಮನರಂಜನೆ ಮೇಳವನ್ನು ಸಂಸದೆ ಮಂಗಲ ಅಂಗಡಿ ಉದ್ಘಾಟಿಸಿದರು. ಎಸ್.ಕೆ. ಪಾಟೀಲ, ಪ್ರದೀಪ ಅಷ್ಟೇಕರ ಇತರರು ಇದ್ದರು.
Published on

ಬೆಳಗಾವಿ: ವೃಂದಾವನ ಎಕ್ಸಿಬಿಷನ್ ವತಿಯಿಂದ ನಗರದ ಸಿಪಿಇಡಿ ಮೈದಾನದಲ್ಲಿ ರೋಬಾಟಿಕ್ ಪಕ್ಷಿ ಹಾಗೂ ವಿವಿಧ ಸವಾರಿಗಳನ್ನು ಒಳಗೊಂಡ 40 ದಿನಗಳ ಕಾಲ ಆಯೋಜಿಸಿರುವ ಫನ್ ಫೇರ್ ಫೆಸ್ಟಿವಲ್ ಮನರಂಜನೆ ಮೇಳವನ್ನು ಸಂಸದೆ ಮಂಗಲ ಅಂಗಡಿ ಅವರು ಭಾನುವಾರ ಉದ್ಘಾಟಿಸಿದರು. ಮೇಳ ಪ್ರದರ್ಶನದಿಂದ ಬೆಳಗಾವಿಗರಿಗೆ ಸುಮಾರು ಒಂದು ತಿಂಗಳ ಕಾಲ ಮನರಂಜನೆ ದೊರೆಯಲಿದೆ ಎಂದು ಸಂಸದೆ ಮಂಗಲ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.

ಆಯೋಜಕ ಎಸ್.ಕೆ. ಪಾಟೀಲ ಮಾತನಾಡಿ, ರೋಬಾಟಿಕ್ ಪಕ್ಷಿಗಳ ಜತೆಗೆ ಇಡಿ ಕುಟುಂಬದ ಮನರಂಜನೆಗಾಗಿ ವಿವಿಧ ರೈಡ್‌ಗಳು, ಆಭರಣಗಳು, ಗಾರ್ಮೆಂಟ್ಸ್, ಮೋಜಿನ ಆಟಗಳು, ಆಹಾರ ಮಳಿಗೆಗಳನ್ನು ಸಹ ಪ್ರದರ್ಶನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು. ಪಯೋನೀರ್ ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ, ಯಶ ಕಮ್ಯುನಿಕೇಷನ್ ನಿರ್ದೇಶಕ ಪ್ರಕಾಶ ಕಾಲಕುಂದ್ರಿಕರ, ವಿನಯ ಕದಮ, ಮಹಾಂತೇಶ
ಹುಲ್ವಿ, ಎಚ್.ಎಂ.ಕಳಸ, ಕುಂತಿನಾಥ ಕಲಮಣಿ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net