

ಕಲಬುರಗಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ೧೪೬ನೇ ಜನ್ಮದಿನದ ನಿಮಿತ್ತ ನಗರದ ಕನ್ನಡ ಭವನದಲ್ಲಿ ಜು.೨ರಂದು ಬೆಳಗ್ಗೆ ೧೧.೩೦ಕ್ಕೆ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ನಾಲ್ಕನೇ ವರ‍್ಷಿಕೋತ್ಸವ ಆಚರಿಸಲಾಗುವುದು ಎಂದು ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಆರ್.ಸಿ.ಘಾಳೆ ತಿಳಿಸಿದರು.
ಜಯಂತಿ ನಿಮಿತ್ತ ಬೆಳಗ್ಗೆ ೯.೩೦ಕ್ಕೆ ನಗರದ ಜಗತ್ ವೃತ್ತದಿಂದ ಎಸ್ವಿಪಿ ವೃತ್ತದ ಮರ‍್ಗವಾಗಿ ಕನ್ನಡ ಭವನದವರೆಗೆ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ. ಸಾಮಾಜಿಕ ಚಿಂತಕಿ ಜಾಹ್ನವಿ ಎಸ್.ಮೋದಿ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜ ಅಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಡಿವೈಎಸ್ಪಿ ಆರ್.ಸಿ.ಘಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಬಸವ ಪಾಟೀಲ್ ಜವಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಲ್ಲ ಕಾಯಕ ಶರಣರ ಸಂಟನೆಗಳು, ವಚನ ಸಾಹಿತ್ಯದ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ರವೀಂದ್ರ ಶಾಬಾದಿ, ಶರಣಪ್ಪ ಜೇನವೇರಿ, ವಿನೋದಕುಮಾರ ಜೇನವೇರಿ ಇತರರಿದ್ದರು.