ಪ್ಲಾಸ್ಮಾ ದಾನ ಜಾಗೃತಿಗೆ ನಡಿಗೆ

0109Klb04
Published on


ಕಲಬುರಗಿ:
ಕರೊನಾ ಸೋಂಕಿತರು ಗಂಭೀರ ಸ್ಥಿತಿಯಲ್ಲಿದ್ದರೆ ಬೇಗ ಚೇತರಿಸಿಕೊಳ್ಳುವಂತಾಗಲು ಕೋವಿಡ್-19 ಪಾಸಿಟಿವ್ ಆಗಿ ಗುಣ ಹೊಂದಿದವರು ಪ್ಲಾಸ್ಮಾ ದಾನ ಮಾಡಲು ಮುಂದಾಗುವಂತೆ ಜಾಗೃತಿ ಮೂಡಿಸಲು ನಗರದಲ್ಲಿ ಸೋಮವಾರ ಅರಿವಿನ ನಡಿಗೆ ಮಾಡಲಾಯಿತು.
ಜಗತ್ ವೃತ್ತದ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಬಳಿಯಿಂದ ಎಸ್ವಿಪಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿದ ಪ್ರಮುಖರು, ಸುಮಾರು ಹೊತ್ತು ಜಾಗೃತಿ ಘೋಷಣೆಗಳನ್ನು ಕೂಗಿದರು. ನಂತರ ಡಿಸಿಗೆ ಮನವಿಪತ್ರ ಸಲ್ಲಿಸಿ ಕೂಡಲೇ ಕಲಬುರಗಿಯಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಿಕೆ ಆರಂಭಿಸುವಂತೆ ಕೋರಿದರು.
ಜಾಥಾದುದ್ದಕ್ಕೂ ಯುವಕರು ಕೈಯಲ್ಲಿ ಕರಪತ್ರ ಹಿಡಿದು ಜಾಗೃತಿ ಘೋಷಣೆ ಕೂಗುವ ಮೂಲಕ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರು. ಅನೇಕರಿಗೆ ತಿಳಿವಳಿಕೆಯೂ ನೀಡಿದರು.
ಜಿ-99 ಮುಖ್ಯಸ್ಥ ಶರಣು ಪಪ್ಪಾ ಮತ್ತು ನಮ್ಮ ಸಂಕಲ್ಪ ತಂಡದ ಲಕ್ಷ್ಮೀಕಾಂತ ಜೋಳದ ಮಾತನಾಡಿ, ಪ್ಲಾಸ್ಮಾ ಥೆರಪಿ ಬೆಂಗಳೂರು-ಹುಬ್ಬಳ್ಳಿಯಂತೆ ಕಲಬುರಗಿಯಲ್ಲೂ ಶೀಘ್ರ ಆರಂಭಿಸಬೇಕು. ಪ್ಲಾಸ್ಮಾ ಡೋನರ್ ಕೇಂದ್ರ ಸ್ಥಾಪಿಸಬೇಕು. ಸೋಂಕಿನಿಂದ ಗುಣ ಹೊಂದಿದವರು ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದು, ಇದರ ಲಾಭ ಸೋಂಕಿತರಿಗೆ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಗುಬ್ಬಿ ಕಾಲನಿ ರೆಸಿಡೆಂಟ್ಸ್ ಫೋರಂ ಅಧ್ಯಕ್ಷ ಸಿದ್ಧರಾಜ ಬಿರಾದಾರ ಮಾತನಾಡಿ, ಪ್ಲಾಸ್ಮಾ ದಾನಿಗಳು ಸೊಲ್ಲಾಪುರ, ಹೈದರಾಬಾದ್ಗೆ ಹೋಗಿ ನೀಡಿ ಬರುತ್ತಿದ್ದಾರೆ. ಹೀಗಾಗಿ ಸಕರ್ಾರ ನಗರದಲ್ಲಿ ಪ್ಲಾಸ್ಮಾ ಡೋನರ್ ಸೆಂಟರ್ ಆರಂಭಿಸಬೇಕು ಒತ್ತಾಯಿಸಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಜಾಗೃತಿ ತಂಡದ ಡಾ.ವಿನೋದಕುಮಾರ ಬಿ., ಆನಂದ ಚವ್ಹಾಣ್, ಮೋಹನ ರಾಠೋಡ್, ಅಶ್ವಿನಕುಮಾರ ಡಿ., ಯಲ್ಲಾಲಿಂಗ, ಮಾಲಾ ಡಿ., ಸಂಗೀತಾ, ಮಂಜುನಾಥ ಅಂಕಲಗಿ, ಸಂತೋಷ ಪಾಟೀಲ್, ಪರಮೇಶ್ವರ, ಗುರು ಬೋಧಿ, ರಾಘು ಬಳ್ಳಾ, ನಿತೀನ್, ವೀರೇಶ ಪಾಟೀಲ್, ಶ್ರೀನಿವಾಸ ಬೋಸ್ಲೆ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net