ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಕ್ರಮ ಕೈಗೊಳ್ಳಿ

WhatsApp Image 2024-07-22 at 9.08.51 PM
Published on

ಕಲಬುರಗಿ: ರಾಜ್ಯದಲ್ಲಿ ಕಲಬುರಗಿ ಸೇರಿ ಐದು ನಗರ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸಾಗಣೆ, ಸಂಗ್ರಹ, ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮತ್ತು ಬಳಕೆ ನಿರ್ಬಂಧ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಪರಾಮರ್ಶಿಸಿದ ಅವರು, ದಾಳಿ ಮತ್ತು ಅಲ್ಪ ದಂಡಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜನರಲ್ಲಿ ಅರಿವು ಮೂಸಿಸುವ ಜತೆಗೆ ವಾಣಿಜ್ಯ, ಅಂಗಡಿ-ಮುAಗಟ್ಟು, ಕಾರ್ಖಾನೆ, ಸಗಟು ವಿತರಕರು, ಗೋದಾಮು, ಹೋಟೆಲ್, ಬೀದಿ ಬದಿ ವ್ಯಾಪಾರಿಗಳ ಮೇಲೆ ಪೌರ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಅಭಿಯಂತರರು ನಿರಂತರ ದಾಳಿ ನಡೆಸಿ ದಂಡ ವಿಧಿಸಬೇಕು ಎಂದರು.
ಮೊದಲು, ಎರಡನೇ ಬಾರಿ ಉಲ್ಲಂಘಿಸಿದರೆ ದಂಢ ವಿಧಿಸಿ, ಮೂರನೇ ಬಾರಿ ಮುಂದುವರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಹೊರ ಜಿಲ್ಲಾ, ಗಡಿ ರಾಜ್ಯದಿಂದ ಜಿಲ್ಲೆಗೆ ನಿಷೇಧಿತ ಪ್ಲಾಸ್ಟಿಕ್ ಆಮದು ಆಗದಂತೆ ಚೆಕ್ ಪೋಸ್ಟ್ನಲ್ಲಿ ನಿಗಾ ಇಡಬೇಕು. ನಗರದಲ್ಲಿ ವಾಣಿಜ್ಯ ಇಲಾಖೆಯವರು ಚೆಕ್ ಪೋಸ್ಟ್ ಸ್ಥಾಪಿಸಬೇಕು. ಎಂಎಸ್‌ಎಇ ಕೈಗಾರಿಕೆಗಳಲ್ಲಿ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಗಣೇಶ ಹಬ್ಬದಲ್ಲಿ ಪರಿಸರಕ್ಕೆ ಹಾನಿಕಾರ ಪಿಒಪಿ ಗಣಪ ತ್ಯಜಿಸಿ, ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವಂತೆ ನಗರದ ಜನತೆ, ಸಂಘ-ಸAಸ್ಥೆಗಳಿಗೆ, ಪ್ರತಿಷ್ಠಾಪನಾ ಮಂಡಳಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಅದಮ್ ಪಟೇಲ್ ಮಾತನಾಡಿದರು. ಇದುವರೆಗೆ ತಲಾ ಎರಡು ಪ್ಲಾಸ್ಟಿಕ್ ತಯಾರಿಕೆ ಘಟಕ, ಗೋದಾಮುಗಳ ಮೇಲೆ ದಾಳಿ ಮಾಡಿ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಕಾರ್ಖಾನೆ ಶಾಶ್ವತವಾಗಿ ಮುಚ್ಚಿಸಲು ಮಂಡಳಿಗೆ ಶಿಫಾರಸ್ಸು ಮಾಡಲಾಗಿದೆ. ಜಿ¯್ಲÉಯ ಸಿಮೆಂಟ್ ಕಂಪನಿಗಳಿಗೆ ಪ್ಲಾಸ್ಟಿಕï ತ್ಯಾಜ್ಯ ಕೋ-ಪ್ರೊಸೆಸಿಂಗï ಮಾಡಲು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ, ಪರಿಸರ ಅಭಿಯಂತರ ಸುಷ್ಮಾ ಸಾಗರ, ಜಿಲ್ಲೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಇಂಜಿನೀಯರ್‌ಗಳು, ಆರೋಗ್ಯ ನಿರೀP್ಷÀಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net