ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಿ

11 HBD 2
ಹುಮನಾಬಾದ್ ತಾಲೂಕಿನ ಧೂಮ್ಮನಸೂರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಬೇಡ ಪ್ರಕೃತಿ ಬೇಕು ಅಭಿಯಾನದಲ್ಲಿ ಜಿಪಂ ಸಿಇಒ ಡಾ. ಗಿರೀಶ್ ಬದೋಲೆ ಮಾತನಾಡಿದರು. ತಾಪಂ ಇಒ ದೀಪಿಕಾ ನಾಯ್ಕರ್, ಗ್ರಾಪಂ ಅಧ್ಯಕ್ಷ ವೀರಪ್ಪ ಭೋತಳೆ, ಉಪಾಧ್ಯಕ್ಷೆ ಲಕ್ಷ್ಮೀ ಸಂಗೋಳಗಿ, ಮಲ್ಲಿರ್ಕಾಜುನ್ ಸಗಾರ ಇತರರಿದ್ದರು.
Published on

ಹುಮನಾಬಾದ್: ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ಗಳಿಂದ ನಾವೆಲ್ಲರೂ ದೂರ ಉಳಿಯಬೇಕು. ಪರಿಶುದ್ಧ ಬೆಳಕು, ಗಾಳಿ, ನೀರು ಮತ್ತು ಆಹಾರದಿಂದ ಮಾತ್ರ ಗುಣಮಟ್ಟದ ಆರೋಗ್ಯ ಕಾಪಾಡಲು ಸಾಧ್ಯ. ಹೀಗಾಗಿ ನಾವುಗಳು ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.

ಧೂಮ್ಮನಸೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಬೇಡ ಪ್ರಕೃತಿ ಬೇಕು ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನನಿತ್ಯ ಆಹಾರ ಪದಾರ್ಥಗಳಿಗೆ ಪ್ಲಾಸ್ಟಿಕ್ ಉಪಯೋಗಿಸುತ್ತಿದ್ದರಿಂದ ಕೆಲವೊಂದು ಬ್ಯಾಕ್ಟರಿಯಾಗಳು ತಿನ್ನುವ ಆಹಾರದಲ್ಲಿ ಮಿಶ್ರಣಗೊಂಡು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಜತೆಗೆ ಜಲಮೂಲಗಳನ್ನು ಪ್ಲಾಸ್ಟಿಕ್ ಹಾವಳಿಯಿಂದ ರಕ್ಷಣೆ ಮಾಡುವುದು ಮತ್ತು ದನ-ಕರುಗಳು ಸಹ ಪ್ಲಾಸ್ಟಿಕ್ ಸೇವನೆಯಿಂದ ಅಪಾಯಕಾರಿಯಾಗಿರುತ್ತದೆ ಎಂದು ಜನರಲ್ಲಿ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರತಿಯೊಬ್ಬರೂ ಮನೆಯಲ್ಲಿ ಅಡುಗೆ ಮಾಡುವಾಗ ಪ್ಲಾಸ್ಟಿಕ್ ಸುಡುವುದನ್ನು ತ್ಯಜಿಸಬೇಕು.ಅದರಿಂದ ಹೊರಬರುವ ವಿಷ ಅನಿಲದಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದ್ದರಿಂದ ಇದರ ಮಹತ್ವ ಅರಿತು ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಮಾತನಾಡಿ, ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ತೀವ್ರವಾಗಿ ಬೆಳೆಯುತ್ತಿದೆ. ಇದರಿಂದ ಸಾರ್ವಜನಿಕರು ದೂರವಿರಬೇಕೆಂದು ಹೇಳಿದರು.

ಗ್ರಾಪಂ ಅಧ್ಯಕ್ಷ ವೀರಪ್ಪ ಭೋತಳೆ, ಉಪಾಧ್ಯಕ್ಷೆ ಲಕ್ಷ್ಮೀ ಸಂಗೋಳಗಿ, ಸದಸ್ಯ ಸಂಜುಕುಮಾರ ಕಿಣಿ, ಪ್ರಮುಖರಾದ ಜ್ಞಾನದೇವ ಜಾಜಿ, ಜಾಫರ್, ಶ್ರೀಮಂತ ಮಾಸ್ಟರ್, ಸಂಗೀತ ನಿಂಬುರೆ, ಬಸವರಾಜ ಬೋರಳಿ, ಪಿಡಿಒ ಮಲ್ಲಿರ್ಕಾಜುನ್ ಸಗಾರ, ಸಿಬ್ಬಂದಿ ತುಕಾರಾಮ, ಓಂಕಾರ, ಗಂಗೂಶ್ರೀ, ವ್ಯೆಜಿನಾಥ, ಬ್ರಹ್ಮಾನಂದ ಇತರರಿದ್ದರು. ಆರಂಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net