ಪ್ಲಾಸ್ಟಿಕ್ ಬಿಡಿ, ಬಟ್ಟೆ ಬ್ಯಾಗ್ ಬಳಕೆ ಮಾಡಿ

28
Published on

ಮೈಸೂರು: ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲ ಮಾರಾಟ ನಿಲ್ಲಿಸಬೇಕು. ಗ್ರಾಹಕರು ಸಹ ಮನೆಯಿಂದ ಬಟ್ಟೆ ಬ್ಯಾಗ್ ತಂದು ವ್ಯಾಪಾರಸ್ಥರಿಗೂ ಸಹಕಾರ ನೀಡಬೇಕು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಹೇಳಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ಮಂಡಿ ಮೊಹಲ್ಲಾದಲ್ಲಿ ಸೋಮವಾರ ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳ ಬಗ್ಗೆ ಕರಪತ್ರ ಮತ್ತು ಬಟ್ಟೆ ಬ್ಯಾಗ್ ವಿತರಿಸಿ ಮಾತನಾಡಿದರು.

ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ವಿಶ್ವವಿಖ್ಯಾತವಾಗಿದೆ. ಇಲ್ಲಿಗೆ ದೇಶ-ವಿದೇಶದಿಂದ ಜನರು ಬರುತ್ತಾರೆ. ಮೈಸೂರು ದೇಶದ ಸ್ವಚ್ಛನಗರಿಯಾಗಿ ಬಿರುದು ಪಡೆದಿರುವುದು ಹೆಮ್ಮೆಯ ವಿಚಾರ. ಆದರೆ, ಪ್ಲಾಸ್ಟಿಕ್ ಬಳಕೆ ರಸ್ತೆಬದಿಯಿಂದ ಶಾಪಿಂಗ್ ಮಾಲ್‌ವರೆಗೂ ಅವಲಂಬಿತವಾಗಿದೆ. ಅದರಿಂದ ಮಾರಣಾಂತಿಕ ರೋಗಗಳು ಬರುತ್ತದೆ ಎಂದರು.

ಜನಾಂದೋಲನವಾಗಲಿ:
ಪ್ಲಾಸ್ಟಿಕ್ ತ್ಯಾಜ್ಯವಾಗಿ ಕರಗಲು 500 ವರ್ಷ ಬೇಕು. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗಲಿದೆ. ಪಾಲಿಕೆಯೂ ಸಹ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆದರೆ ಅದು ಜನಾಂದೋಲನದಿಂದ ಮಾತ್ರ ಸಾಧ್ಯ. ಸ್ವಚ್ಛನಗರಿ ಮೈಸೂರನ್ನು ಪಾರಂಪರಿಕ ನಗರವಾಗಿ ಉಳಿಸಿಕೊಳ್ಳಬೇಕಾದರೆ ಪ್ಲಾಸ್ಟಿಕ್‌ಬಳಕೆಯನ್ನು ಜನಸಾಮಾನ್ಯರು ನಿಲ್ಲಿಸಬೇಕು ಎಂದು ಡಾ.ನಾಗರಾಜು ಹೇಳಿದರು.

ಈ ಸಲ ದಸರಾವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂದು ಎಲ್ಲರೂ ಸಂಕಲ್ಪ ಮಾಡೋಣ. ವ್ಯಾಪಾರಸ್ಥರು ಮತ್ತು ಗ್ರಾಹಕರು ಆರೋಗ್ಯವಂತ ಮೈಸೂರು ನಿರ್ಮಾಣಕ್ಕೆ ಕೈಜೋಡಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net