ಪ್ಲಾಸ್ಟಿಕ್ ಬಳಕೆಗೆ ಹಾಕಬೇಕಿದೆ ಕಡಿವಾಣ

CTD---3
Published on

ಚಿತ್ರದುರ್ಗ: ಮಾನವ ಸಹಿತ ಸಕಲ ಜೀವಸಂಕುಲಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್. ದಾಸೇಗೌಡ ಹೇಳಿದರು.

ವಿಜ್ಞಾನ ಕೇಂದ್ರ, ಸ್ವಾಸ್ಥೃ ಸರ್ಕಲ್ ಫೌಂಡೇಷನ್ ಮತ್ತು ಕರ್ನಾಟಕ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಚಿನ್ಮೂಲಾದ್ರಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಭೂಮಿಯ ಮೂಲೆ, ಮೂಲೆಯನ್ನು ಆಕ್ರಮಿಸಿರುವ ಪ್ಲಾಸ್ಟಿಕ್ ವಾಯು, ಜಲ, ಮಣ್ಣು, ಆಹಾರಗಳ ಮೂಲಕ ಜೀವ ಸಂಕುಲಕ್ಕೆ ಕಂಟಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸ್ವಾಸ್ಥೃ ಸರ್ಕಲ್ ಫೌಂಡೇಷನ್ ಸಂಸ್ಥಾಪಕಿ ಡಾ. ತೋಯಜಾಕ್ಷಿಭಾಯಿ ಅವರು ಮಾತನಾಡಿ, ಮಾನವನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬರುತ್ತಿದೆ. ಪ್ಲಾಸ್ಟಿಕ್ ಮುಕ್ತ ಜೀವನ ರೂಢಿಸಿಕೊಳ್ಳಬೇಕಿದೆ ಎಂದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ. ರಾಜಕುಮಾರ್ ಮಾತನಾಡಿ, ತಪ್ಪದೇ ಬಟ್ಟೆಚೀಲಗಳನ್ನೇ ಬಳಸಬೇಕು ಎಂದರು.

ಕರ್ನಾಟಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಆರ್. ನಾರಾಯಣಪ್ಪ, ಸಂಸ್ಥೆ ಅಧ್ಯಕ್ಷ ವಿ.ಆರ್. ಮಂಜುನಾಥ್, ಶಿಕ್ಷಕ ಜಿ. ಮಹೇಶ್ವರಪ್ಪ ಮಾತನಾಡಿದರು.

ಫೌಂಡೇಷನ್ ಸಂಚಾಲಕ ಎಂ.ಟಿ. ಮೂರ್ತಪ್ಪ, ಚಿತ್ರರಚನೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ಪಿ. ಕೃಷ್ಣಪ್ಪ, ಯುವರಾಜ್, ಕೆ. ರಾಮಪ್ಪ, ಜಯದೇವಮೂರ್ತಿ ಇತರರು ಇದ್ದರು.

ಶಿಕ್ಷಕ ಗುರು ಪ್ರಸಾದ್ ಸ್ವಾಗತಿಸಿ, ಶಿಕ್ಷಕಿ ರಜನಿ ವಂದಿಸಿದರು. ಶಿಕ್ಷಕ ಎಚ್. ಮುರಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net