ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ

CTD PARISAR CHITRA------
Published on

ಚಿತ್ರದುರ್ಗ: ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ, ಪ್ರತಿಯೊಬ್ಬರೂ ತಿರಸ್ಕರಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾವಣಗೆರೆ ವಲಯದ ಹಿರಿಯ ಪರಿಸರ ಅಧಿಕಾರಿ ರಮೇಶ್‌ನಾಯ್ಕ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯ ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದರ ಕುರಿತು ಮಂಡಳಿ ಹಾಗೂ ಕಲಾ ಚೈ ತನ್ಯ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಗರದ ಕ್ರೀಡಾಭವನದಲ್ಲಿ ಗುರುವಾರ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಸಕಲ ಜೀವರಾಶಿಗಳಿಗೆ ಗಾಳಿ, ಬೆಳಕು, ನೀರು ಸಮಾನವಾಗಿ ದೊರಕಬೇಕು. ಮನುಷ್ಯನ ಸ್ವಾರ್ಥ ಹಾಗೂ ಅತಿ ಆಸೆಯಿಂದ ಪರಿಸರ ಇಂದು ಹಾನಿಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಿತವಾದ ಬಳಕೆ ಹಾಗೂ ಪ್ಲಾಸ್ಟಿಕ್ ಉ ತ್ಪನ್ನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪರಿಸರ ರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕೆಂದರು.

ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಎಂ.ಆರ್.ಮಂಜುನಾಥ ಅವರು, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪರಿಸರ ರಕ್ಷಣೆ ಹಾ ಗೂ ಸ್ವಚ್ಛತೆ ಪರಿಕಲ್ಪನೆ ಮೂಡಿಸಲಾಗುತ್ತಿದೆ. ಗಿಡ ಮರಗಳು ಪರಿಸರ ಸಮತೋಲನದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂ ದರು.

ನಗರಸಭೆ ಪರಿಸರ ಅಧಿಕಾರಿ ಎ.ಜಾಫರ್, ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲಾಧಿಕಾರಿ ಇ.ಸಂಪತ್‌ಕುಮಾರ್,ಮಂಡಳಿ ಚಿತ್ರದುರ್ಗ ಪ್ರಾದೇಶಿಕ ಕಚೇರಿ ಜಿಲ್ಲಾ ಪರಿಸರಾಧಿಕಾರಿ ಆಸಿಫ್‌ಖಾನ್ ಮಾತನಾಡಿದರು. ಉಪ ಪರಿಸರಾಧಿಕಾರಿ ರಾಜೇಶ್, ಕಲಾ ಚೈತನ್ಯ ಸಂಸ್ಥೆಯ ನಾಗರಾಜ ಬೇಂದ್ರೆ ಇತರರು ಇದ್ದರು. ಕಾರ‌್ಯಕ್ರಮದಲ್ಲಿ ಪರಿಸರ ಸ್ನೇಹಿ ಬಟ್ಟೆ ಕೈಚೀಲಗಳನ್ನು ಬಿಡುಗಡೆ ಮಾಡಲಾಯಿತು.

278ವಿದ್ಯಾರ್ಥಿಗಳು ಭಾಗಿ

ನಗರದ 33 ವಿವಿಧ ಶಾಲೆಗಳ 278 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. 8,9 ಹಾ ಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ವಿತರಿಸಲಾಯಿತು. 8 ನೇ ತರಗತಿ ವಿಭಾಗದಲ್ಲಿ ಬಾಪೂಜಿ ಪ್ರೌಢ ಶಾಲೆ ವಿದ್ಯಾರ್ಥಿ ಎಲ್.ಶುಭಶ್ರೀ ಸಮಾಧಾನಕರ, ಜ್ಞಾನ ಭಾರತಿ ಶಾಲೆಯ ಕೆ.ಪೂರ್ವಿ(ತೃ),ಪಾರ್ಶ್ವನಾಥ ಶಾಲೆ ಎಂ.ವಿನೋದ್(ದ್ವಿ), ಸೇಂಟ್ ಜೋಸೆಫ್ ಶಾಲೆಯ ಪಿ.ಪ್ರತಿಭಾ(ಪ್ರ).

9ನೇ ತರಗತಿ ವಿಭಾಗದಲ್ಲಿ ಕೋಟೆ ಪ್ರೌಢಶಾಲೆಯ ಪಿ.ಜೀವನ್ ಸಮಾಧಾನಕರ, ವಿದ್ಯಾವಿಕಾಸ ಶಾಲೆ ಕೆ.ವಿ.ಸಿಂಧೂರ(ತೃ), ಎಸ್‌ಜೆಎಂ ಶಾಲೆಯ ಕೆ.ವಿ.ಅನ್ವಿತಾ(ದ್ವಿ), ಕೆ.ಕೆ.ನ್ಯಾಷನಲ್ ಶಾಲೆ ಟಿ.ತೇಜಸ್ವಿನಿ(ಪ್ರ). 10ನೇ ತರಗತಿ ವಿಭಾಗದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಎಸ್.ನಂದಿನಿ ಸಮಾಧಾನಕರ, ಎಸ್‌ಆರ್‌ಎಸ್ ಶಾಲೆಯ ವಿ.ಎಸ್.ಕಿಶೋರ್(ತೃ), ರಿಜನಲ್ ಇಂಗ್ಲಿಷ್ ಶಾಲೆಯ ಹುರಿಯಾ ಅರ್ಫನ್(ದ್ವಿ), ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಎಂ.ಪ್ರಿಯಾಂಕ(ಪ್ರ)ಬಹುಮಾನಗಳಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net