

ಹಾಸನ : ಭೂವನಹಳ್ಳಿ ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರೌಢಶಾಲೆ ಶಾಲೆ, ಗವೇನಹಳ್ಳಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಗಳ ಸಹಯೋಗದಲ್ಲಿ ಗವೇನಹಳ್ಳಿ ಗ್ರಾಮದಲ್ಲಿ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಜಾಥಾ, ಪ್ಲಾಸ್ಟಿಕ್ ಸಂಗ್ರಹ, ವರ್ಗೀಕರಣ ಹಾಗೂ ಬಾಟಲ್ ಇಟ್ಟಿಗೀಕರಣ ಚಟುವಟಿಕೆ ಯಶಸ್ವಿಯಾಗಿ ನಡೆಯಿತು.
ಎನ್‌ಆರ್‌ಎಲ್‌ಎಂ ಸಹಾಯಕ ಯೋಜನಾಧಿಕಾರಿ ಎಚ್. ರವಿ, ಭುವನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಅಹಮದ್ ಹಗರೆ, ಡಾ. ಮಂಜುನಾಥ್, ಡಾ. ನಾಗೇಶ್ ಮೋನಿಕ , ವೇಣುಗೋಪಾಲ್, ಮುಖ್ಯ ಶಿಕ್ಷಕಿ ಶಕುಂತಲಾ, ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಇದ್ದರು