

ಚಿತ್ರದುರ್ಗ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕಾಗಿ ತಮ್ಮ ಕೈಗಾರಿಕೋದ್ಯಮಗಳ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಸೂಕ್ತ ಜಾ ಗೃತಿ ಮೂಡಿಸುವಂತೆ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅಸಿಫ್‌ಖಾನ್ ಉದ್ದಿಮೆದಾರರಿಗೆ ಸ ಲಹೆ ನೀಡಿದರು.
ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಪ್ರಮುಖ ಕೈಗಾರಿಕೆ,ಗಣಿಗಾರಿಕೆ ಮತ್ತು ಕ್ರಷರ್ ಘಟಕ ಗಳ ಪ್ರತಿನಿಧಿಗಳೊಂದಿಗೆ ವಿಶ್ವ ಪರಿಸರ ದಿನಾಚರಣೆ-2025ರ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಕಾರ‌್ಯಕ್ರಮದಲ್ಲಿ ಅವರು ಮಾತ ನಾಡಿ,ಈ ವರ್ಷದ ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯ 'ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು'ಎಂದಿದೆ.
ಪ್ಲಾಸ್ಟಿಕ್ ಬಳಕೆ ಮತ್ತು ಅದರ ತ್ಯಾಜ್ಯದಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ಕುರಿತು ಎಲ್ಲರೂ ಅರಿವು ಮೂಡಿಸಬೇಕಿದೆ. ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಸಸಿ ನೆಡುವುದು ಸೇರಿದಂತೆ ಪರಿಸರ ಸಂರಕ್ಷಣೆಗೆ ಪೂರಕ ಚಟುವಟಿಕೆಗಳನ್ನು ಏರ್ಪಡಿಸಬೇಕು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಮೂಡಿಸ ಬೇಕು.ಕೈಗಾರಿಕೆಗಳ ಆವರಣ ಪ್ಲಾಸ್ಟಿಕ್ ಮುಕ್ತವಾಗಿರುವಂತೆ ಕ್ರಮ ವಹಿಸ ಬೇಕೆಂ ದು ಪ್ರತಿನಿಧಿಗಳಿಗೆ ಸೂಚಿಸಿದರು. ಉಪ ಪರಿಸರ ಅಧಿಕಾರಿ ರಾಜೇಶ್,ಜಿಲ್ಲಾ ಕ್ರಷರ್ ಅಸೋಷಿಯನ್ ಕಾರ‌್ಯದರ್ಶಿ ಜಿ.ಬಿ.ಶೇಖರಪ್ಪ ಇತರರು ಇದ್ದರು.