

ಸಂಡೂರು: ಪ್ರತಿಯೊಬ್ಬರೂ ಪಾಲ್ಗೊಂಡು ಸ್ವಾತಂತ್ರೃ ದಿನವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆ ಪೂರ್ವಬಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ಕಚೇರಿಗಳ ಮೇಲೆ ದೀಪಾಲಂಕಾರ, ಸ್ತಬ್ಧ ಚಿತ್ರ ಅಳವಡಿಸಬೇಕು. ಪುರಸಭೆ ವತಿಯಿಂದ ಪ್ಲಾಸ್ಟಿಕ್ ಧ್ವಜ ಬಳಸದಂತೆ ಜಾಗೃತಿ ಮೂಡಿಸಬೇಕು ಎಂದರು.
ಬಿಇಒ ಡಾ.ಐ.ಆರ್.ಅಕ್ಕಿ ಮಾತನಾಡಿ, ಸ್ವಾತಂತ್ರೃ ದಿನಾಚರಣೆಗೆ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ತಾಲೂಕಿನ ಏಳು ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಆ ಶಾಲೆಯ ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಗುವುದು. ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಗುವುದು. ಸಾಧಕರ ಪಟ್ಟಿಯನ್ನು ಆ.11ರಂದು ತಹಸೀಲ್ದಾರ್‌ಗೆ ಸಲ್ಲಿಸಬೇಕು ಎಂದರು.
ಲಂಬಾಣಿ ಕಸೂತಿಯಲ್ಲಿ ಜಿ-20 ಶೃಂಗಸಭೆಯಲ್ಲಿ ಸಾಧನೆ ಗೈದವರು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧ ನಾಗರಾಜ್ ಅವರನ್ನು ಸನ್ಮಾನಿಸಬೇಕು. ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಸುವಂತೆ ಸಂಘಟನೆಕಾರರು ಸಭೆಗೆ ತಿಳಿಸಿದರು
ಉಪ ತಹಸಿಲ್ದಾರ್ ಕೆ.ಎಂ.ಶಿವಕುಮಾರ್, ರವಿಕುಮಾರ್, ಆರ್‌ಎಫ್‌ಒಗಳಾದ ಕೆ.ಗಿರಿಶ್, ಆರ್.ಉಮೇಶ್, ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ್, ರೈತ ಸಂಘದ ಅಧ್ಯಕ್ಷ ಎಂಎಲ್‌ಕೆ.ನಾಯ್ಡು, ಕರವೇ ಪ್ರಜಾ ವೇದಿಕೆ ಅಧ್ಯಕ್ಷ ಕೆ.ಆರ್.ಕುಮಾರ ಸ್ವಾಮಿ, ಚಂದ್ರಶೇಖರ್ ಇಸಿಒ ಬಸವರಾಜ್ ಇತರರಿದ್ದರು.