

ಮೈಸೂರು: ತಾಪಮಾನ ಹೆಚ್ಚಳ, ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಇಲವಾಲದ ನಿವಾಸಿ ಮಂಜು ಮೈಸೂರಿನಿಂದ ಶ್ರೀಶೈಲದವರೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆಯೂ ನಗರದಿಂದ ಮಹದೇಶ್ವರಬೆಟ್ಟಕ್ಕೆ ಇದೇ ರೀತಿ ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆ ಯಶಸ್ವಿಯಾಗಿತ್ತು. ಆಗಲೂ ದಾರಿಯಲ್ಲಿ ವಿದ್ಯಾರ್ಥಿಗಳು, ಜನತೆಗೆ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ತಿಳಿಸಿ, ಅವುಗಳ ಬಳಕೆ ಕೈಬಿಡುವಂತೆ ಮನವಿ ಮಾಡಿಕೊಡಲಾಯಿತು. ಹೀಗಾಗಿ ಈಗ ದೂರದ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಸೈಕಲ್ ಯಾತ್ರೆ ಕೈಗೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಂಜು ತಿಳಿಸಿದರು.