

ಹನೂರು: ತಾಲೂಕಿನ ಹನೂರು ಬಫರ್ ವಲಯ ಅರಣ್ಯ ವೀಕ್ಷಕರೊಬ್ಬರೂ ಭಾನುವಾರ ಸಸಿ ನೆಡುವುದರ ಜತೆಗೆ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವುದರ ಮೂಲಕ ಪುತ್ರನ ಹುಟ್ಟು ಹಬ್ಬವನ್ನು ಆಚರಿಸಿದರು.
ಕಳೆದ ಹಲವು ವರ್ಷಗಳಿಂದ ಹನೂರು ಬಫರ್ ವಲಯದಲ್ಲಿ ಅರಣ್ಯ ವೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಅವರು ಪುತ್ರ ಶ್ರೀನಿವಾಸ್ ಪ್ರಸಾದ್ ಹುಟ್ಟು ಹಬ್ಬದ ಅಂಗವಾಗಿ ಅರಣ್ಯ ಇಲಾಖೆಯ ನರ್ಸರಿ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು. 5 ಜನರೊಂದಿಗೆ ನರ್ಸರಿಯಿಂದ ಅಜ್ಜೀಪುರಕ್ಕೆ ತೆರಳುವ 2 ಕಿ.ಮೀವರೆಗಿನ ಅರಕನಹಳ್ಳದ ತನಕ ತೆರಳಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ 30 ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು.