ಪ್ರೌಢಶಾಲೆಯಲ್ಲಿ ಚಂದ್ರಯಾನ-3 ಸಂಭ್ರಮ

24Kush04
Published on

ಕುಶಾಲನಗರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಬುಧವಾರ ಭಾರತದ ಮಹತ್ವಾಂಕ್ಷೆಯ ಯೋಜನೆ ಚಂದ್ರಯಾನ-3 ತನ್ನ ಗುರಿಯತ್ತ ಯಶಸ್ವಿಯಾಗಿ ಸಾಗಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ಆದ ಪ್ರಕಿಯೆ ಕುರಿತು ಕೊಡಗಿನ ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಚಂದ್ರಯಾನ-3 ರ ಆರ್ಬಿಟರ್ ಸಂಪರ್ಕ ಯಶಸ್ವಿಯಾಗಿದ್ದಕ್ಕೆ ಮಕ್ಕಳು ಸಂಭ್ರಮಪಟ್ಟರು.
ಶಾಲೆಯಲ್ಲಿ ಗುರುವಾರ ವಿಜ್ಞಾನ ಸಂಘ, ಎನ್.ಎಸ್.ಎಸ್. ಘಟಕ ಹಾಗೂ ಇಕೋ ಕ್ಲಬ್ ವತಿಯಿಂದ ಚಂದ್ರಯಾನ- 3 ರ ಯಶಸ್ವಿ ಲ್ಯಾಂಡಿಂಗ್ ಕುರಿತು ವಿದ್ಯಾರ್ಥಿಗಳಿಗೆ ವಿಡಿಯೋ ಪ್ರದರ್ಶನದ ಮೂಲಕ ಏರ್ಪಡಿಸಿದ್ದ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಂದ್ರಯಾನ-3 ಉಪಗ್ರಹವು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿ ವಿಕ್ರಮ ಸಾಧಿಸಿದ ಬಗ್ಗೆ ವಿವರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net