ಪ್ರೌಢಶಾಲೆಗೆ ಡೆಸ್ಕ್, ಬೆಂಚುಗಳ ಕೊಡುಗೆ

1 ckm 3
ಚಿಕ್ಕಮಗಳೂರಿನ ಹಿರೇಮಗಳೂರಿನ ಪ್ರಭುಲಿಂಗ ಪ್ರೌಢಶಾಲೆಯ ಮಕ್ಕಳ ಅನುಕೂಲಕ್ಕಾಗಿ ಸುಮಾರು ೧ ಲಕ್ಷ ರೂ. ಮೌಲ್ಯದ ವೆಚ್ಚದಲ್ಲಿ ದಾನಿಗಳ ನೆರವಿನಿಂದ ಹತ್ತು ಡೆಸ್ಕ್ ಬೆಂಚುಗಳನ್ನು ಬುಧವಾರ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ಉಮಾಮಹೇಶ್ವರಪ್ಪ, ರಶ್ಮಿ, ಮಲ್ಲಿಕಾರ್ಜುನ್ ರಮ್ಯಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಿರೇಮಗಳೂರಿನ ಪ್ರಭುಲಿಂಗ ಪ್ರೌಢಶಾಲೆಯ ಮಕ್ಕಳ ಅನುಕೂಲಕ್ಕಾಗಿ ಸುಮಾರು ೧ ಲಕ್ಷ ರೂ. ಮೌಲ್ಯದ ವೆಚ್ಚದಲ್ಲಿ ದಾನಿಗಳ ನೆರವಿನಿಂದ ಹತ್ತು ಡೆಸ್ಕ್ ಬೆಂಚುಗಳನ್ನು ಬುಧವಾರ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.

ಈ ವೇಳೆ ಮಾತನಾಡಿದ ದಾನಿ ಆರ್.ಎಂ.ಉಮಾಮಹೇಶ್ವರಪ್ಪ, ಸರ್ಕಾರಿ ಶಾಲೆಗಳ ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವಂಥ ಪ್ರಜೆಗಳು. ದೇಶದ ಮಾಜಿ ರಾಷ್ಟçಪತಿ ಅಬ್ದುಲ್ ಕಲಾಂ ಸೇರಿದಂತೆ ಅನೇಕ ಗಣ್ಯರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಪೂರೈಸಿ ಸಾಧಕರಾದವರು ಎಂದರು.

ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಬೋಧಕರಿಂದ ಸರ್ಕಾರಿ ಶಾಲೆಯ ಮಕ್ಕಳು ದೇಶ-ವಿದೇಶ ದಲ್ಲಿ ಛಾಪು ಮೂಡಿಸಿದ್ದಾರೆ. ಮಕ್ಕಳು ಕೀಳರಿಮೆ ಹೊಂದದೇ ದಾನಿಗಳು ಹಾಗೂ ಸಂಘ-ಸAಸ್ಥೆಗಳ ನೆರವಿ ನಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಾನಿಗಳಾದ ಆರ್.ಯು.ರಶ್ಮಿ, ಕೆ.ಎಂ.ಮಲ್ಲಿಕಾರ್ಜುನ್, ಆರ್.ಯು.ರಮ್ಯ, ಎನ್. ಈ.ಚೇತನ್, ಆರ್.ಯು.ರಂಜನಿ, ಕೆ.ಎಂ.ರುದ್ರಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ನರಸಿಂಹ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net