

ಹಾಸನ: ಯುವ ಪೀಳಿಗೆಯನ್ನು ಉತ್ತಮ ದಾರಿಗೆ ಕೊಂಡೂಯ್ಯುವ ನಿಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದು ಸೇನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಹೇಳಿದರು.
ಶ್ರೀ ರಾಮ ಸೇನಾ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಫೆಬ್ರವರಿ 14ರಂದು ಗೋ ಆಲಿಂಗನ ಮತ್ತು ಮಾತಾ-ಪಿತೃ ಪೂಜಾ ದಿನ ಹಾಗೂ ಪುಲ್ಮಾಮ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಸಂತಾಪ ನಮನಗಳನ್ನು ಸಲ್ಲಿಸಲಾಗುತ್ತದೆ ಜತೆಗೆ ಪ್ರೇಮಿಗಳ ದಿನವನ್ನು ಯುವಕರು ಗುಂಪು ಗುಂಪಾಗಿ ಆಚರಣೆ ಮಾಡಿದಲ್ಲಿ ಶ್ರೀ ರಾಮ ಸೇನೆ ಖಂಡಿಸಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಶ್ರೀರಾಮ ಸೇನೆ ಸನಾತನ ಹಿಂದು ಧರ್ಮದ ಉಳಿವಿಗಾಗಿ ಹಲವಾರು ವರ್ಷ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಗುಡಿ- ಗೋಪುರಗಳ ರಕ್ಷಣೆ, ಲವ್ ಜಿಹಾದ್, ಗೋ ಹತ್ಯೆಯಂತಹ ಹಲವಾರು ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತ ಬಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ಅರಸೀಕೆರೆ ತಾಲೂಕು ಅಧ್ಯಕ್ಷ ಎಸ್. ವರುಣ್, ಹಾಸನ ನಗರ ಅಧ್ಯಕ್ಷ ನಿತಿನ್, ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಂದನ್, ದೀಪು, ಸಚಿನ್ ಇತರರು ಉಪಸ್ಥಿತರಿದ್ದರು.