

ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣಕ್ಕೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಈಚೆಗೆ ಭೇಟಿ ನೀಡಿ ಪ್ರೇಕ್ಷಕರ ಗ್ಯಾಲರಿ ಪರಿಶೀಲಿಸಿದರು.
ಬಹು ವರ್ಷಗಳ ವಾಲ್ಮೀಕಿ ಕ್ರೀಡಾಂಗಣದ ಒಳಾಂಗಣ ಕಟ್ಟಡದ ಗೋಡೆ ಮತ್ತು ಮೇಲ್ಛಾವಣೆ ಶಿಥಿಲಗೊಂಡಿದೆ. ಹೀಗಾಗಿ, ಕ್ರೀಡೆ ವೀಕ್ಷಿಸಲು ಪ್ರೇಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡಾಂಗಣ ದುರಸ್ತಿ, ಕಟ್ಟಡ ಪುನರ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಹೀಗಾಗಿ, ಅಧಿಕಾರಿಗಳೊಂದಿಗೆ ರಾಹುಲ ಜಾರಕಿಹೊಳಿ ಭೇಟಿ ನೀಡಿ, ಕಟ್ಟಡದ ವ್ಯವಸ್ಥೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಸುರೇಶ ಗಸ್ತಿ, ವಿ.ಎಸ್.ಪಾಟೀಲ, ಶಿವು ಪಾಟೀಲ, ಶಾನೂಲ್ ನಗಾರಿ ಇತರರಿದ್ದರು.