ಪ್ರೇರಣಾ ದಿವಸ ಭಿತ್ತಿ ಪತ್ರ ಬಿಡುಗಡೆ

h3- KRMSS
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್​ಎಂಎಸ್​ಎಸ್) ವತಿಯಿಂದ ಆಗಸ್ಟ್ 9ರಂದು ನಡೆಯಲಿರುವ 5ನೇ ವರ್ಷದ ಪ್ರೇರಣಾ ದಿವಸ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಶೆಟ್ಟರ ಸೋಮವಾರ ಬಿಡುಗಡೆಗೊಳಿಸಿದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ. ರಘು ಅಕಮಂಚಿ, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಉಪಸ್ಥಿತರಿದ್ದರು.

9ನೇ ಅಗಸ್ಟ್ 2015ರಂದು ಸಂಘ ಪ್ರಾರಂಭವಾಗಿದೆ. ಆದ್ದರಿಂದ ಆ. 9ನ್ನು ಪ್ರೇರಣಾ ದಿನವಾಗಿ ಆಚರಿಸಲಾಗುತ್ತದೆ. ಶಿಕ್ಷಕ ಬಂಧು- ಭಗಿನಿಯರು ಆಗಸ್ಟ್ 15ರವರೆಗೆ ಸುತ್ತ ಮುತ್ತಲ ಸಮಾಜಕ್ಕಾಗಿ ಕಾರ್ಯ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net