

ಬೀದರ್: ಜಿಲ್ಲೆಯಲ್ಲಿ ಹಲವರು ತಮ್ಮ ವಾಹನಗಳ ಮೇಲೆ ಅನಗತ್ಯವಾಗಿ ಪ್ರೆಸ್ ಎಂದು ಬರೆಸಿ ಇದರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘದ ಪ್ರಮುಖರ ನಿಯೋಗ ಜಿಲ್ಲಾಧಿಕಾರಿ ರಾಮಚಂದ್ರನ್, ಎಸ್ಪಿ ನಾಗೇಶ ಅವರಿಗೆ ಮಂಗಳವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿ, ನಕಲಿ ಪತ್ರಕರ್ತರ ವಿರುದ್ಧ ಮತ್ತು ವಾಹನ ಮೇಲೆ ಪ್ರೆಸ್ ಎಂದು ಬರೆದು ಈ ಪದ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಂಡು ಮಾಧ್ಯಮದ ಘನತೆ, ಗೌರವ ಕಾಪಾಡಬೇಕೆಂದು ಆಗ್ರಹಿಸಲಾಗಿದೆ.
ಖಾಸಗಿ ಟಿವಿ ಚಾನಲ್ಗಳ ಹೆಸರಲ್ಲಿ ಅನೇಕರು ಅಕ್ರಮವಾಗಿ ಯುಟೂಬ್ ಚಾನಲ್ ಮಾಡಿಕೊಂಡು ಜನರ ದಾರಿ ತಪ್ಪಿಸುವ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಅನಗತ್ಯ ವಿಷಯ ಬಿತ್ತರಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಮಾಧ್ಯಮಕ್ಕೆ ಯಾವ ಸಂಬಂಧವಿಲ್ಲದಿದ್ದರೂ ಬೈಕ್, ಕಾರು ಇತರ ವಾಹನಗಳ ಮೇಲೆ ಪ್ರೆಸ್ ಎಂದು ಬರೆಸಿ ಓಡಾಡುತ್ತಿದ್ದಾರೆ. ಪತ್ರಿಕಾ ಧರ್ಮಕ್ಕೆ ಕಪ್ಪು ಚುಕ್ಕೆ ಆಗಿರುವ ಇಂಥವರ ಮೇಲೆ ಕ್ರಮ ಅಗತ್ಯ ಎಂದು ಕೋರಿದ್ದಾರೆ.
ಪತ್ರಕರ್ತರಿಗೆ ವಾತರ್ಾ ಇಲಾಖೆ ಮಾನ್ಯತೆ ಕಾಡರ್್ ನೀಡಿದೆ. ಮಾನ್ಯತೆ ಕಾಡರ್್ ಇಲ್ಲದ ಸಂಘದ ಸದಸ್ಯರಾದವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ 2021ರ ಮಾಚರ್್ವರೆಗಿನ ಅವಧಿಯುಳ್ಳ ಗುರುತಿನ ಚೀಟಿ ನೀಡಲಾಗಿದೆ. ಹೀಗಾಗಿ ಎಲ್ಲ ವಾಹನ ತಪಾಸಣೆ ಮಾಡಿ ಪ್ರೆಸ್ ಪದ ಬಳಕೆ ಸರಿಯೋ? ತಪ್ಪೋ ಎಂದು ಗುರುತಿನ ಚೀಟಿ ನೋಡಿ ಪರಿಶೀಲಿಸಬೇಕು. ನಕಲಿ ಇದ್ದವರು ಯಾರೇ ಇದ್ದರೂ ಅಂಥವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾ ಕರಂಜಿ, ಪ್ರಮುಖರಾದ ಬಸವರಾಜ ಕಾಮಶೆಟ್ಥಿ, ನಾಗಶೆಟ್ಟಿ ಧರಂಪುರ, ಶ್ರೀನಿವಾಸ ಚೌದ್ರಿ, ಶಿವಕುಮಾರ ಸ್ವಾಮಿ, ಸುನಿಲ ಕುಲಕಣರ್ಿ, ಪ್ರಥ್ವಿರಾಜ, ಶಿವಕುಮಾರ ಸದಲಾಪುರೆ, ಅಲಿಮೋದ್ದೀನ್ ಇತರರಿದ್ದರು.