ಪ್ರೀತಿಸಿ‌ ಮದುವೆಯಾಗಿದ್ದ ಗೃಹಿಣಿ ಕೊಲೆ: ಪತಿ ಸೇರಿ ಮೂವರ ವಿರುದ್ಧ ದೂರು

4872448.25105762-377312.822873831.jpg
Published on

ಶಿವಮೊಗ್ಗ: ಕುಂಬಾರಗುಂಡಿಯಲ್ಲಿ ವರದಕ್ಷಿಣೆ ತರದಿದ್ದಕ್ಕೆ ಪ್ರೀತಿಸಿ‌‌ ಮದುವೆ ಆಗಿದ್ದ ಗೃಹಿಣಿಯೊಬ್ಬರನ್ನು ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿ ಮೂವರ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂಬಾರಗುಂಡಿಯ ಲತಾ(23) ಕೊಲೆಯಾದ ಗೃಹಿಣಿ. ಪತಿ ಮುರುಳಿ, ಆತನ ತಾಯಿ ವಸಂತಮ್ಮ ಹಾಗೂ ಸಹೋದರ ಕಾರ್ತಿಕ್ ಕೊಲೆ ಮಾಡಿದವರು ಎಂದು ದೂರು ನೀಡಲಾಗಿದೆ. ಮೂರು ವರ್ಷದ ಹಿಂದೆ ಮಾನರ್ಮಿಬೈಲ್‌ನ ಲತಾ ಅವರನ್ನು ಕುಂಬಾರಗುಂಡಿಯ ಮುರಳಿ ಪ್ರೀತಿಸಿ ಮದುವೆಯಾಗಿದ್ದ. ಆದರೆ ದಾಂಪತ್ಯದಲ್ಲಿ ಸಣ್ಣಪುಟ್ಟ ಜಗಳ ನಿರಂತರವಾಗಿದ್ದವು.

ಈ ನಡುವೆ ಲತಾಗೆ ವರದಕ್ಷಿಣೆ ತರುವಂತೆ ಮುರಳಿ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿಯೂ ದಂಪತಿ ನಡುವೆ ಗಲಾಟೆ ನಡೆದಿತ್ತು. ಬಳಿಕ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಲತಾ ಕುಟುಂಬಸ್ಥರು ಪತಿ ಸೇರಿ ಮೂವರು ವಿರುದ್ಧ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net