ಪ್ರೀತಿಸಿದ್ದಕ್ಕಾಗಿ ಯುವಕನ ಕೊಲೆ

Crime Logo
Published on

ಕಲಬುರಗಿ: ಅತ್ತೆ ಮಗಳನ್ನು ಪ್ರೀತಿಸಿದ್ದಕ್ಕಾಗಿ (ತಂದೆ ತಂಗಿ ಪುತ್ರಿ) ಯುವಕನನ್ನು ನಗರದ ಶಹಾಬಾದ್ ರಸ್ತೆಯಲ್ಲಿ ಮಂಗಳವಾರ ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಆಳAದ ತಾಲೂಕಿನ ಬಮ್ಮನಳ್ಳಿ ಗ್ರಾಮದ, ನಗರದ ಓಝಾ ಲೇಔಟ್ ನಿವಾಸಿ ಪ್ರವೀಣ ಬಿರಾದಾರ (೧೮) ಕೊಲೆಯಾಗಿದ್ದು, ಕುಸನೂರದ ಮಲ್ಲಿಕಾರ್ಜುನ ತೆಗ್ಗಿನಮನಿ (೨೩), ಶಾರುಖಖಾನ್ ಮೌಲಾ (೨೩) ಬಂಧಿತರು.
ಪ್ರವೀಣ ಕುಸನೂರ ಗ್ರಾಮದಲ್ಲಿರುವ ಸೋದರತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಈ ವಿಷಯ ಮನೆಯಲ್ಲಿ ತಿಳಿಸಿದ್ದ. ಆದರೆ ಅವರು ಶ್ರೀಮಂತರು, ಬೇಡ ಎಂದು ಹೆತ್ತವರು ತಿಳಿಹೇಳಿದ್ದರೂ ಇಬ್ಬರ ಪ್ರೀತಿ ಮುಂದುವರಿದಿತ್ತು. ಯುವತಿ ಮನೆಯವರ ವಿರೋಧವಿತ್ತು. ಎರಡು ತಿಂಗಳ ಹಿಂದೆ ಯುವತಿ ತಾಯಿ ಮಗಳ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು.
ಪ್ರವೀಣ ತಂದೆ ಜು.೯ರಂದು ಕುಸನೂರದಲ್ಲಿನ ತಂಗಿ ಮನೆಗೆ ಹೋಗಿ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡು ಎಂದು ಕೇಳಿದ್ದರೂ ಸೋದರಿ ನಿರಾಕರಿಸಿದ್ದಾಳೆ. ಅಂದೇ (ಮಂಗಳವಾರ) ರಾತ್ರಿ ೧೧ಕ್ಕೆ ಪೊಲೀಸರು ಅಪರಿಚಿತ ಕೊಲೆಗೀಡಾದವನ ಫೋಟೋ ತೋರಿಸಿದಾಗ ಪ್ರವೀಣ ಮೃತಪಟ್ಟ ವಿಷಯ ತಿಳಿದಿದೆ. ಯುವತಿ ತಾಯಿಯ ಕುಮ್ಮಕ್ಕಿನಿಂದಲೇ ಮಲ್ಲಿಕಾರ್ಜುನ ಮತ್ತು ಶಾರುಖ ಖಾನ್ ಮಾರಕಾಸ್ತçಗಳಿಂದ ಕೊಚ್ಚಿ ಸಾಯಿಸಿದ್ದಾರೆ ಎಂದು ಮೃತನ ತಾಯಿ ನೀಡಿದ ದೂರಿನನ್ವಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net