ಪ್ರೀತಿಸಿದ ಯುವತಿ ಮನೆ ಮುಂದೆ ಪ್ರೇಮಿ ಆತ್ಮಹತ್ಯೆ

Published on

ತುಮಕೂರು: ಪ್ರೀತಿಸಿದ ಯುವತಿ ಮನೆಯವರು ಮದುವೆಗೆ ನಿರಾಕರಿಸಿದರೆಂದು ಆಕೆಯ ಮನೆ ಮುಂದೆಯೇ ಯುವಕ ನೇಣುಬಿಗಿದು ಆತ್ಮಹತ್ಯೆ ಶರಣಾಗಿದ್ದಾನೆ. ನಗರದ ಮಂಜುನಾಥ್​ (32) ಮೃತ. ತುಮಕೂರಿನ ಜಯನಗರ ಬಡಾವಣೆಯ ಚನ್ನಪ್ಪನಪಾಳ್ಯದಲ್ಲಿ ಶುಕ್ರವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್​, ಕೆಲ ತಿಂಗಳಿಂದ ಪಕ್ಕದ ಮನೆ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇಬ್ಬರು ಮದುವೆಯಾಗಲು ನಿಶ್ಚಯಿಸಿಕೊಂಡಿದ್ದರು. ಯುವತಿ ಮನೆಯವರ ಬಳಿ ಮದುವೆ ಪ್ರಸ್ತಾಪವನ್ನು ಮಂಜುನಾಥ್​ ಇಟ್ಟಿದ್ದ ಎನ್ನಲಾಗಿದೆ. ಆದರೆ, ಯುವತಿ ಮನೆಯವರು ಇದನ್ನು ನಿರಾಕರಿಸಿದ್ದಾರೆ. ಇದರಿಂದ ನೊಂದ ಮಂಜುನಾಥ್​ ಯುವತಿ ಮನೆ ಮುಂದೆಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಯುವತಿ ಅಪ್ರಾಪ್ತಳು ಎಂಬ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ. ಜಯನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರಕ್ಕೆ ರವಾನಿಸಿ, ಮರಣೋತ್ತರ ಪರೀೆ ನಡೆಸಲಾಯಿತು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net