ಪ್ರೀತಿಸಿದ ಯುವತಿ ಕೈಕೊಟ್ಟಳು: ಯುವಕ ಆತ್ಮಹತ್ಯೆ.

ಪ್ರೀತಿಸಿದ ಯುವತಿ ಕೈಕೊಟ್ಟಳು: ಯುವಕ ಆತ್ಮಹತ್ಯೆ.
Published on

ಹಾಸನ: ಪ್ರೀತಿಸಿದ ಯುವತಿ ಕೈಕೊಟ್ಟಳು ಎಂಬ ಕಾರಣದಿಂದ ಹಾಸನದ ಯುವಕ ಚೆನ್ನೈನ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗಿದ್ದಾನೆ.

ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್(26)ಮೃತ ಯುವಕ. ಹಾಸನದ ಪ್ರತಿಷ್ಠಿತ ಹೊಟೆಲ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆತ ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ. ಜನವರಿ 27 ರಂದು ತಾನು ಚೆನ್ನೈಲಿದ್ದು ಅಲ್ಲಿಗೇ ಬಾ ಎಂದು ಯುವತಿ ಕರೆದಿದ್ದಾಳೆ. ಆಕೆಯ ಮಾತು ನಂಬಿ ಚೆನ್ನೈಗೆ ಹೋಗಿದ್ದ ಕಾರ್ತಿಕ್‌ಗೆ ಯುವತಿ ಹಾಸನದಲ್ಲೇ ಇರೋದಾಗಿ ಹೇಳಿದ್ದಾಳೆ. ಈಕೆ ತನಗೆ ಮೋಸ ಮಾಡಿದ್ದಾಳೆಂದು ಮನನೊಂದು ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.


ಯುವಕನ ಶವವವನ್ನು ಮಂಗಳವಾರ ಹಾಸನ ನಗರದ ಸ್ವಗೃಹಕ್ಕೆ ತರಲಾಗಿದ್ದು, ತನ ಪ್ರೇಯಸಿ ಹುಡುಗನನ್ನು ನಂಬಿಸಿ ಮೋಸಮಾಡಿದ್ದಾಳೆಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ, ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

ಮೃತನ ಸಂಬಂಧಿಕ ಕಾರ್ತಿಕ್ ಮಾತನಾಡಿ, ನಾವು ಆತನ ಲವರ‌್ಗೆ ಕಾಲ್ ಮಾಡಿದ್ದು, ಏನಾಯ್ತು, ಆತ ಚನ್ನೈಗೆ ಹೇಗೆ ಬಂದಿದ್ದು ಎಂದು ಪ್ರಶ್ನೆ ಮಾಡಿದಾಗ ನಾನೆ ಚೆನ್ನೈಗೆ ಬರಲು ಹೇಳಿದ್ದೇನು. ಈ ವೇಳೆ ಕರೆ ಮಾಡಿ ನಾನು ಸತ್ತು ಹೋಗುತ್ತೇನೆ ಎಂದು ಹೇಳಿದ. ಆದರೆ ಅವನು ಸತ್ತರೆ ನಾನು ಸಾಯುವುದಕ್ಕೆ ಆಗುತ್ತಾ! ಎಂದು ಉತ್ತರ ಕೊಟ್ಟಿದ್ದಾಳೆ ದೂರಿದ್ದಾರೆ. ಇನ್ನು ಪೆನ್‌ಷನ್ ಮೊಹಲ್ಲಾ ಠಾಣೆಗೆ ದೂರು ನೀಡಲು ಹೋದರೆ ನಿರಾಕರಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net