ಪ್ರೀತಿಸಲು ಪೀಡಿಸುತ್ತಿದ್ದವನ ಕೊಲೆ

Published on

ಯುವತಿ ತಂದೆಯಿಂದ ಕೃತ್ಯ

ತಿಪಟೂರು: ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದವನನ್ನು ಹುಡುಗಿಯ ತಂದೆಯೇ ಕೊಲೆ ಮಾಡಿದ್ದಾನೆ. ಶಂಕರನಗರದ ವಾಸಿ ಚೇತನ್​ (25) ಮೃತ. ಆಲೂರು ಗ್ರಾಮದ ಲೋಕೇಶ್​ ಆರೋಪಿ.

ಏನಿದು ಟನೆ: ಪತ್ನಿಯಿಂದ ದೂರವಿದ್ದ ಚೇತನ್​, ಆಲೂರು ಗ್ರಾಮದ ಲೋಕೇಶ್​ ಅವರ ಪುತ್ರಿ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಹಾಗೆಯೇ ಇತ್ತೀಚೆಗೆ ಮದುವೆ ಮಾಡಿಕೊಡುವಂತೆ ಪಾಲಕರ ಬಳಿ ಪದೇ ಪದೆ ಕೇಳುತ್ತಿದ್ದ. ಇದರಿಂದ ರೋಸಿಹೋಗಿದ್ದ ಯುವತಿ ತಂದೆ ಲೋಕೇಶ್​ ನಗರದ ಹೊರವಲಯದ ಹಾಲ್ಕುರಿಕೆ ರಸ್ತೆ ಬಳಿ ಶನಿವಾರ ರಾತ್ರಿ ಮಾರಕ ಅಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ. ಚೇತನ್​ ಶಿವಮೊಗ್ಗ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಕೌಟುಂಬಿಕ ಕಲಹದಿಂದ ಪತ್ನಿ ದೂರವಾಗಿದ್ದ ಹಿನ್ನೆಲೆಯಲ್ಲಿ ಲೋಕೇಶ್​ ಅವರ ಪುತ್ರಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಡಿಎಸ್​ಪಿ ವಿನಾಯಕ ಶೇಟಗೇರಿ, ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಹೊನ್ನವಳ್ಳಿ ಇನ್​ಸ್ಪೆಕ್ಟರ್​ ರಾಜೇಶ್​ ಸ್ಥಳ ಪರಿಶೀಲನೆ ಮಾಡಿದ್ದು, ಹೊನ್ನವಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net