

ಚಿತ್ರದುರ್ಗ:ಸಮನ್ವಯವೆಂಬುದು ಮನುಷ್ಯನ ವಿಕಾಸದ ಮಾರ್ಗವಾಗಿದೆ ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪ ಕಿ ತಾರಿಣಿ ಶುಭದಾಯಿನಿ ಹೇಳಿದರು.
ಮುರುಘಾಮಠದಿಂದ ನಗರದ ಜಿಲ್ಲಾವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರಾವ ಣ ಮಾಸದ ಮನೆ,ಮನೆಗೆ ಚಿಂತನೆ ‘ನಿತ್ಯಕಲ್ಯಾಣ’ಕಾರ‌್ಯಕ್ರಮದಲ್ಲಿ ಸಮನ್ವಯ ದೃಷ್ಟಿ ಕುರಿತು ಉಪನ್ಯಾಸ ನೀಡಿದರು.
ಎಲ್ಲ ಕ್ಷೇತ್ರಗಳಲ್ಲೂ ಸಮನ್ವಯವೆಂಬುದು ಇದೆ. ತಾತ್ವಿಕ ವಿಚಾರಗಳು,ವೈರುಧ್ಯಗಳಿಂದ ಸಮನ್ವಯ ಕೂಡಿದೆ. ನಮಗೆ ಇಂದು ಬು ದ್ಧನ ತತ್ವ ಚಿಂತನೆ,ಆತ ಸಾಧಿಸಿದ ಸತ್ಯದರ್ಶನದ ಅಗತ್ಯವಿದೆ. ದ್ವೇಷವನ್ನು ಪ್ರೀತಿಯಿಂದ ಗೆದ್ದರೆ ಸಮನ್ವಯ ಸಾಧಿಸಬಹುದು. ನಮ್ಮ ಬಹುದೊಡ್ಡ ಶಕ್ತಿಯಾಗಿರುವ ಸಂವಿಧಾನದ ಆಶಯಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.
ತಿಪ್ಪೇರುದ್ರಸ್ವಾಮಿ ಮಾತನಾಡಿ,ಯುಗ,ಯುಗಗಳಿಂದಲೂ ಜೀವನ ನಡೆಸುತ್ತಿರುವ ಶ್ರೇಷ್ಠ-ಕನಿಷ್ಠವೆಂಬ ಭಾವನೆ ದೂರವಾಗಿಲ್ಲ. ವ ಚನ ಚಳವಳಿ ಹುಟ್ಟಿದ್ದೆ ಸಮನ್ವಯದ ದೃಷ್ಟಿಯಿಂದ ಎಂದರು.ಮುರುಘಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀ ಬಸವೇಶ್ವರ ಆಸ್ಪತ್ರೆ ಅಧೀಕ್ಷಕ ಡಾ.ಎಲ್.ಪಾಲಾಕ್ಷಯ್ಯ,ವಕೀಲ ವಿಶ್ವನಾಥ್ ಇದ್ದರು.