

ಚಿಕ್ಕಮಗಳೂರು: ೧೨ನೇ ಶತಮಾನದಲ್ಲಿ ಹುಟ್ಟಿದಂತ ವಚನಗಳಲ್ಲಿ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಲಾಗಿದೆ. ಮನಸ್ಸುಗಳ ಮದ್ಯ ಪ್ರೀತಿ ಇರದಿದ್ದರೆ ಎಲ್ಲ ಸಂಬAಧಗಳು ಬರಡಾಗುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ತಿಳಿಸಿದರು.
ನಗರದ ಮಾಡೆಲ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಮುಗುಳವಳ್ಳಿ ನಂಜಪ್ಪ ಶೆಟ್ಟಿ ಸ್ಮಾರಕ ಜಿಲ್ಲಾ ಮಟ್ಟದ ವಚನ ಸೌರಭ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನುz್ದೆÃಶಿಸಿ ಮಾತನಾಡಿದ ಅವರು, ಜಾತಿ ತಾರತಮ್ಯ ಕಳೆದು ಬದುಕುವುದೇ ಸಂತೋಷ. ಎಲ್ಲರೂ ಒಂದೆಡೆ ಕೂತು ಮಾತನಾಡುವುದೇ ಅನುಭವÀ ಸಂಗ. ಅದೇ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಕಾರ್ಯವಾಗಿತ್ತು. ಯಾವುದೇ ಜಾತಿ ಬೇದದ ಮಾತಿಲ್ಲದೆ ಚಿಂತನ-ಮAಥನ ಅಲ್ಲಿ ನಡೆಸುತ್ತಿದ್ದರು ಎಂದು ತಿಳಿಸಿದರು.
ಎಲ್ಲರೊಟ್ಟಿಗೆ ಪ್ರಿತಿಯಿಂದ ಬದುಕುವವನೇ ಶರಣ. ನಾವು ಸರಿಯಾದ ದಾರಿಯಲ್ಲಿ ನಡೆದರೆ ಸಮಾಜವು ನಮ್ಮ ಜೊತೆ ಸರಿಯಾದ ದಾರಿಯಲ್ಲಿ ನಡೆಯುತ್ತದೆ. ಪ್ರೀತಿಯ ಭಾವನೆಗಳು ಮೂಡುತ್ತವೆ. ಆದ್ದರಿಂದ ಪ್ರೀತಿಯ ಸಮಾಜ ಕಟ್ಟಲು ವಚನ ಸಾಹಿತ್ಯದ ಕಡೆ ಮುಖ ಮಾಡಿ ನಿಮ್ಮ ಬದುಕನ್ನು ನೀವೆ ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಕರೆನೀಡಿದರು.
ನಡೆ-ನುಡಿ ಒಂದಾದರೆ ಬದುಕು ಬಂಗಾರವಾಗುತ್ತದೆ. ವಚನ ಸಾಹಿತ್ಯವೆಂದರೆ ಕೇವಲ ಧಾರ್ಮಿಕ ವಿಚಾರವಲ್ಲ. ಬದಲಿಗೆ ಬದುಕಿನ ಮೌಲ್ಯವನ್ನು ಕಲಿಯುವುದು. ಪ್ರಸಾದದ ಕಲ್ಪನೆಯೆಂದರೆ ಹಂಚಿ ತಿನ್ನುವುದು. ಆದ್ದರಿಂದ ವಚನಗಳಲ್ಲಿರುವ ಮೌಲ್ಯಗಳನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಚನದಿಂದಾದ ಬದಲಾವಣೆಗಾಗಿ ೧೨ನೇ ಶತಮಾನದಲ್ಲಿ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರುವಷ್ಟು ಸ್ವಾತಂತ್ರö್ಯವಿರಲಿಲ್ಲ. ಆದರೆ ವಚನ ಸಾಹಿತ್ಯ ಬೆಳಕಿಗೆ ಬಂದಮೇಲೆ ಅದು ಬದಲಾಗುತ್ತಾ ಬಂದಿತು. ಇಂದು ಮಹಿಳೆಯು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ವಚನಗಳಲ್ಲಿ ವೃತ್ತಿ ಗೌರವವನ್ನು ಕಾಣಬಹುದು. ವಚನಸೌರಭದದಂಥ ಕಾರ್ಯಕ್ರಮಗಳು ನಮ್ಮೊಳಗಿನ ಜ್ಞಾನವನ್ನು ಬೆಳೆಸುತ್ತದೆ. ನೈತಿಕ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶಾಲೆಯ ಸಂಸ್ಥಾಪಕ ಹಾಗೂ ಪ್ರಾಚಾರ್ಯ ಎಂ.ಎನ್.ಷಡಕ್ಷರಿ ಮಾತನಾಡಿ, ಶ್ರೀಮಂತನಾಗಿ ಸಾಯುವುದು ಅದೊಂದು ಅವಮಾನ ಮತ್ತು ಶಾಪ. ಸಾಯುವ ಮುನ್ನ ಏನನ್ನಾದರೂ ಸಾದಿಸಬೇಕು ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಡೆಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಎಲ್ಲ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠವಾದುದು. ಅಂಥ ಶ್ರೇಷ್ಠ ಕಾಯಕವನ್ನು ಷಡಕ್ಷರಿ ಮತ್ತು ವಿಶಾಲ ಷಡಕ್ಷರಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ವಚನ ಸೌರಭ ಕಾರ್ಯಕ್ರಮದಲ್ಲಿ ವಚನ ಗೀತ ಗಾಯನ, ವಚನಗಳಲ್ಲಿ ಬಿಂಬಿತವಾಗಿರುವ ಸಾಮಾಜಿಕ ಮೌಲ್ಯಗಳು ಎಂಬ ವಿಷಯದ ಪ್ರಬಂಧ ರಚನೆ ಮತ್ತು ವಚನಗಾರರ ಬದುಕು ಬರಹಗಳಿಗೆ ಸಂಬAಧಿಸಿದ ರಸಪ್ರಶ್ನೆ ಸ್ಪರ್ದೆಗಳಿದ್ದು, ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತ ತಂಡಗಳಿಗೆ ಬಹುಮಾನಗಳು ಮತ್ತು ಅತೀ ಹೆಚು ಬಹುಮಾನ ಗಳಿಸಿದ ಶ್ರೀಸಾಯಿ ಏಂಜೆಲ್ಸ್ ಶಾಲಾ ತಂಡಕ್ಕೆ ಮುಗುಳವಳ್ಳಿ ನಂಜಪ್ಪ ಶೆಟ್ಟಿ ಪರ್ಯಾಯ ಪಾರಿತೋಷಕ ಹಾಗೂ ೧೦ ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬೆಳವಾಡಿ ಮಂಜುನಾಥ, ಚಟ್ನಳ್ಳಿ ಮಹೇಶ್, ಶಾಲಾ ಸಂಸ್ಥಾಪಕಿ ವಿಶಾಲ ಷಡಕ್ಷರಿ, ಮುಖ್ಯ ಶಿಕ್ಷಕ ಯೋಗೀಶ್, ಪ್ರಮುಖರಾದ ಗುರುಶಾಂತಪ್ಪ, ಸಂಧ್ಯಾರಾಣಿ ಮತ್ತಿತರರಿದ್ದರು.