ಪ್ರೀತಿ ಹೆಸರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ

Rape sdp
Published on

ಚಿತ್ರದುರ್ಗ:ಪ್ರೀತಿ ಹೆಸರಿನಲ್ಲಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕ,ಆಕೆ ಗರ್ಭಿಣಿಯಾದ ವಿಷಯ ತಿಳಿದು ಆಕೆಗೆ ಕೈಕೊಟ್ಟಿರುವ ಹಿರಿಯೂರಲ್ಲಿ ನಡೆದಿದ್ದು,ಶುಕ್ರವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ದರ್ಶನ್,17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿ ಹಾಗೂ ಮದುವೆ ಹೆಸರಲ್ಲಿ ಪುಸಲಾಯಿಸಿ ಹಿರಿಯೂರಿನ ಮನೆಯೊಂದರಲ್ಲಿ ಹಾಗೂ ಇತರೆ 2-3 ಬೇರೆ,ಬೇರೆ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ಆಕೆಯನ್ನು ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ. ಬಾಲಕಿ ಪಾಲಕರು ಹಿರಿಯೂರು ನಗರ ಠಾಣೆಗೆ ದೂರು ನೀಡಿದ್ದು,ಆರೋಪಿ ವಿರುದ್ಧ ಪೊಲೀಸರು ಪೋ ಕ್ಸೋ ಕೇಸ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net