

ಹಾಸನ: ಮಾಜಿ ಶಾಸಕ ಪ್ರೀತಮ್ ಜೆ.ಗೌಡ ಅವರ ನೇತೃತ್ವದಲ್ಲಿ ಬುಧವಾರ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಮ್ ಗೌಡ ಅವರು, ಬಿಜೆಪಿ ಸದಸ್ಯತ್ವ ನೀಡುವ ಮೂಲಕ ಬರಮಾಡಿಕೊಂಡರು.
ಸತ್ಯಮಂಗಲ ನಿವಾಸಿ ಗಿರೀಶ್ ಅವರು ಮಾತನಾಡಿ, ಹಲವು ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ ಪ್ರೀತಮ್ ಗೌಡ ಅವರ ಆಡಳಿತ ವೈಖರಿಯಿಂದ ಪ್ರೇರಣೆಗೊಂಡು ಬಿಜೆಪಿ ಸೇರಿದ್ದೇನೆಂದರು.
ಸತ್ಯಮಂಗಲದ ಅನೇಕರು ಜೆಡಿಎಸ್ ಜೊತೆಗಿನ ಬಾಂಧವ್ಯ ಮುಗಿಸಲು ಮುಂದಾಗಿದ್ದಾರೆ. ಪ್ರೀತಮ್ ಅವರು ಶಾಸಕರಾಗಿದ್ದಾಗ ಗ್ರಾಮ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ನೀಡಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸಕಾರಾತಕವಾಗಿ ಸ್ಪಂದಿಸುವ ಜನಪ್ರತಿನಿಧಿ ಬೇಕು. ಹಾಲಿ ಶಾಸಕ ಎಚ್.ಪಿ.ಸ್ವರೂಪ್ ಅವರು ಕಾರ್ಯಕರ್ತರ ವಿಶ್ವಾಸ ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸತ್ಯಮಂಗಲದಲ್ಲಿ ಯುಜಿಡಿ, ರಸ್ತೆ, ವಿದ್ಯುತ್ ದೀಪ ಎಲ್ಲಾ ಕಾಮಗಾರಿ ಕಳೆದ ಶಾಸಕರ ಅವಧಿಯಲ್ಲೇ ಆಗಿದೆ. ಕೆರೆ ಅಭಿವೃದ್ಧಿಯಲ್ಲೂ ಪ್ರೀತಮ್ ಅವರ ಕೊಡುಗೆ ಸಾಕಷ್ಟಿದೆ. ಹೀಗಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇವೆಂದರು.
ಗ್ರಾಮದ ರೋಹಿತ್, ಆಕಾಶ್, ವಿಶ್ವನಾಥ್, ಧನುಷ್, ಹೇಮಂತ್, ಮೋಹಿತ್ ಹಾಗು ಇತರರಿದ್ದರು.